ಕೂಡಿಗೆ, ಆ. ೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಸ್. ಗಣೇಶ್, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು ನಾಮಪತ್ರ ಸಲ್ಲಿಕೆಯಾಗಿತ್ತು. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ಸಹಕಾರ ಇಲಾಖೆಯ ಅಧಿಕಾರಿ ಸಂತೋಷ್ ಅವರು ಅಧ್ಯಕ್ಷರಾಗಿ ಡಿ.ಎಸ್. ಗಣೇಶ್ ಮತ್ತು ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಅವರನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಸರಕಾರದ ನಾಮ ನಿರ್ದೇಶಕ ಸೇರಿದಂತೆ ೯ ನಿರ್ದೇಶಕರು ಭಾಗವಹಿಸಿದ್ದರು. ೧೩ ನಿರ್ದೇಶಕರಲ್ಲಿ ೪ ಮಂದಿ ಗೈರುಹಾಜರಾಗಿದ್ದರು.
ನೂತನ ಅಧ್ಯಕ್ಷ ಡಿ.ಎಸ್. ಗಣೇಶ್ ಮಾತನಾಡಿ, ಹಾಲು ಉತ್ಪಾದಕರ ಸಂಘವು ವರ್ಷದಿಂದ ವರ್ಷಕ್ಕೆ ಲಾಭವನ್ನುಗಳಿಸಿ ರೈತರಿಗೆ ಅನುಕೂಲವಾಗುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹಾಸನ ಹಾಲು ಒಕ್ಕೂಟದ ಸಹಕಾರದಿಂದ ಉತ್ತಮ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅನುದಾನ ಎರಡು ಲಕ್ಷ ರೂಗಳಲ್ಲಿ ಕಟ್ಟಡದ ಹೆಚ್ಚುವರಿ ಕೊಠಡಿ ನಿರ್ಮಿಸಲಾಗಿದೆ. ಈ ಸಾಲಿನಲ್ಲಿ ಸಂಘವು ರೂ. ೪ ಲಕ್ಷಕ್ಕೂ ಹೆಚ್ಚು ಲಾಭವನ್ನು ಗಳಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ದಿನೇಶ್, ಗಿರೀಶ್, ಖತೀಜಾ, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಕೂಡುಮಂಗಳೂರು ಕೇಂದ್ರದ ಪ್ರಮುಖರಾದ ಪ್ರವಿಣ್, ಮಂಜುನಾಥ್, ಸಂಘದ ನಿರ್ದೇಶಕರಾದ ಅಶ್ವಿನಿ, ಕುಮಾರ್, ರೇವೆಗೌಡ, ಗೋವಿಂದ ಶೆಟ್ಟಿ, ಪುಷ್ಪ, ಲತಾ, ಸುಶೀಲಾ, ಲಕ್ಷಿö್ಮ ಸೇರಿದಂತೆ ಸಂಘದ ಕಾರ್ಯದರ್ಶಿ ಹಾಜರಿದ್ದರು.