ಭಾಗಮAಡಲ, ಆ. ೪: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿಲ್ಲ. ಆದರೆ ಇತ್ತೀಚೆಗೆ ಲಾಕ್ಡೌನ್ನ್ನು ತೆರವುಗೊಳಿಸಲಾಗಿದೆ. ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಪುಣ್ಯಕ್ಷೇತ್ರಗಳಾದ ಭಾಗಮಂಡಲ ಹಾಗೂ ತಲಕಾವೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬರುತ್ತಿದ್ದಾರೆ.
ಕಳೆದ ಒಂದುವಾರದಿAದ ತಮಿಳುನಾಡು ಹಾಗೂ ಬೆಂಗಳೂರಿನಿAದ ಹೆಚ್ಚಿನ ಪ್ರವಾಸಿ ಗರು ಬಸ್ಗಳಲ್ಲಿ ಬರುತ್ತಿದ್ದಾರೆ. ಯಾತ್ರಾರ್ಥಿಗಳಲ್ಲದೆ ಪ್ರವಾಸಿಗರಾಗಿ ಭಾಗಮಂಡಲ ತಲಕಾವೇರಿಗೆ ಜನರು ಭೇಟಿ ನೀಡುತ್ತಿರುವುದು ಸ್ಥಳೀಯರಲ್ಲಿ ಆತಂಕ ತಂದೊಡ್ಡಿದೆ. ಕೇರಳ ಹಾಗೂ ಮಹಾರಾಷ್ಟç ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸುವವರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದ್ದರೂ ಇತ್ತ ತಮಿಳುನಾಡಿನಿಂದ ಹೆಚ್ಚಿನ ಧರಿಸದೆ ಜನರು ಅಡ್ಡಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಅಡುಗೆ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಇಂದು ಭಾಗಮಂಡಲದ ಮಾರ್ಕೆಟ್ ಆವರಣದಲ್ಲಿ ಒಂದಷ್ಟು ಪ್ರವಾಸಿಗರು ತೊಟ್ಟಿ ತುಂಬಿ ತುಳುಕುತ್ತಿದೆ.
ಯಾತ್ರಾ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾಗಮಂಡಲ ದೇವಾಲಯದ ಸಿಬ್ಬಂದಿಗಳಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬAದಿವೆ. ಸ್ಥಳೀಯ ಕೊಡಗಿನ ಯಾತ್ರಾರ್ಥಿಗಳು ಆಟಿ ತಿಂಗಳ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿಲ್ಲ. ಜಿಲ್ಲೆಯ ಹೊರಭಾಗಗಳ ಜನರನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಸಂಬAಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
- ಕುಯ್ಯಮುಡಿ ಸುನಿಲ್