ಮಡಿಕೇರಿ, ಆ. ೪: ಮಡಿಕೇರಿ ವಕೀಲರ ಸಂಘದ ಸದಸ್ಯರಾದ ಪಿ.ಕೆ. ದಿವ್ಯಾ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಡಿಕೇರಿಯ ದಿವ್ಯಾ ಟೈಯರ್ಸ್ನ ಮಾಲೀಕರಾದ ಪಿ.ಎಂ. ಕುಮಾರನ್ ಹಾಗೂ ಇಂದಿರಾ ದಂಪತಿಯ ಪುತ್ರಿ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾ ಅವರ ಆಯ್ಕೆಗೆ ಮಡಿಕೇರಿ ವಕೀಲರ ಸಂಘ ಹೆಮ್ಮೆಪಡುತ್ತದೆಯೆಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ತಿಳಿಸಿದ್ದಾರೆ.