ಟೋಕಿಯೋ, ಆ. ೪: ಒಲಂಪಿಕ್ ಹಾಕಿಯ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಇಂದು ಭಾರತ ಮಹಿಳೆಯರ ತಂಡ ಅರ್ಜೆಂಟೀನಾ ವಿರುದ್ಧ ೧-೨ ಗೋಲುಗಳಿಂದ ಸೋಲು ಅನುಭವಿಸಿತು. ತಾ.೬ ರಂದು ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ಸ್ಪರ್ಧಿಸಲಿದೆ.
ಇಂದು ನಡೆದ ಪಂದ್ಯದಲ್ಲಿ ಮೊದಲ ೨ ನಿಮಿಷದಲ್ಲಿಯೇ ಗೋಲ್ ಭಾರಿಸಿ ಭಾರತ ಮುನ್ನಡೆ ಪಡೆಯಿತು. ಆದರೆ ನಂತರದಲ್ಲಿ ಅರ್ಜೆಂಟೀನಾ ೨ ಗೋಲ್ಗಳನ್ನು ಭಾರಿಸಿ ಜಯ ಸಾಧಿಸಿತು. ತಾ. ೬ರ ಫೈನಲ್ನಲ್ಲಿ ಅರ್ಜೆಂಟೀನಾ ನೆದರ್ಲ್ಯಾಂಡ್ ವಿರುದ್ಧ ಆಡಲಿದೆ. ತಾ. ೫ ರಂದು (ಇಂದು) ಪುರುಷರ ವಿಭಾಗದಲ್ಲಿ ಆಸ್ಟೆçÃಲಿಯಾ ಹಾಗೂ ಬೆಲ್ಜಿಯಂ ಫೈನಲ್ನಲ್ಲಿ ಆಡಲಿದ್ದು, ಭಾರತ ಜರ್ಮನಿ ವಿರುದ್ಧ ಕಂಚಿಗೆ ಸ್ಪರ್ಧಿಸಲಿದೆ.