ಮಡಿಕೇರಿ, ಆ. ೩: ವಚನಕಾರರು ಸಂಸ್ಕೃತದ ಆಚಾರ್ಯರಲ್ಲ, ಅವರು ಅಚ್ಚ ಕನ್ನಡದ ಬೇಸಾಯಗಾರರು. ವಚನದ ಭಾಷೆ. ದೇವವಾಣಿ ಅಲ್ಲ ಜನವಾಣಿ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ವಚನ ಗಾಯನ ಕಾರ್ಯಕ್ರಮವನ್ನು ಗೂಗಲ್ ಮೀಟ್ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ನಾಡು ಆಚಾರ್ಯ ಪರಂಪರೆ, ದಾಸ ಪರಂಪರೆ, ಶರಣ ಪರಂಪರೆ ಇವುಗಳನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟಿದೆ. ತಾಯಿಯಂದಿ ರಿಗೆ, ಹೆಣ್ಣುಮಕ್ಕಳಿಗೆ ಒಂದು ಅಪ್ರತಿಮವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದೆ. ಶರಣರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸುಮಾರು ೩೩ ಸಾವಿರ ವಚನಕಾರ್ತಿಯರು ಇದ್ದರು ಎಂದರು
ಕೊರೊನಾದ ಕ್ಲಿಷ್ಟಕರ ಸಮಯದಲ್ಲಿ ವಚನ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು. ನುಡಿದರೆ ಮುತ್ತಿನ ಹಾರದಂತಿಬೇಕು, ವಚನ ಹಾಡಿ ಕಾರ್ಯಕ್ರಮ ಉದ್ಘಾಟಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಹೆಚ್.ವಿ. ಶಿವಪ್ಪ ಮಾತನಾಡಿ, ವಚನ ಸಾಹಿತ್ಯ ಹಲವಾರು ಪ್ರಕಾರಗಳಿಂದ ರಚನೆ ಯಾಗಿದೆ ದುಃಖದ ಸನ್ನಿವೇಶ ವಿರಬಹುದು, ಶೃಂಗಾರವಿರಬಹುದು, ಸಾಮಾಜಿಕ ಬದ್ಧತೆ ಇರಬಹುದು, ಆರ್ಥಿಕ ವ್ಯವಸ್ಥೆಯ ಪರಿಕಲ್ಪನೆ ಇರಬಹುದು. ಅವೆಲ್ಲವೂ ಜನರಿಗೆ ಮನಮುಟ್ಟುವಂತೆ ಶರಣರು ವಚನ ಗಳಲ್ಲಿ ಹೇಳಿದ್ದಾರೆ. ವಚನಗಳು ಜನಸಾಮಾನ್ಯರಿಗೆ ಅರ್ಥವಾಗುವ ಅತಿ ಸುಲಭವಾದ ಕನ್ನಡ ಭಾಷೆಯಲ್ಲಿ ರಚಿತವಾಗಿದೆ ಎಂದರು. ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ. ಪಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ೧೫ ಗಾಯಕರು ಶಿವ ಶರಣರು ರಚಿಸಿದ ವಿವಿಧ ವಚನಗಳನ್ನು ಹಾಡಿದರು. ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಬಳಗದ ಸಲಹೆಗಾರ ಟಿ.ಪಿ. ರಮೇಶ್, ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ. ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ಬಿ.ಎನ್. ಮನುಶೆಣೈ, ಕೆ.ಟಿ. ಬೇಬಿ ಮ್ಯಾಥ್ಯೂ, ಟಿ.ಜಿ. ಪ್ರೇಮಕುಮಾರ್, ಉಮೇಶ್ ಭಟ್, ಬಿ.ಆರ್. ಜೋಯಪ್ಪ, ರಂಜಿತ್ ಕೆ.ಯು, ಪ್ರತಿಮಾ ರೈ, ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ. ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿ ದ್ದರು. ಎಂಬತ್ತಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.