ಗೋಣಿಕೊಪ್ಪಲು, ಆ.೩: ಕಾಡಾನೆ ದಾಳಿಯಿಂದ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕೊಡಗಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ತಾ. ೩ರ ಮುಂಜಾನೆ ೬ ಗಂಟೆಯ ವೇಳೆ ಕಾರ್ಮಿಕ ದೇವರಾಜ್ (೫೪) ಎಂದಿನAತೆ ತನ್ನ ತೋಟದ ಮನೆಯಿಂದ ಹೊರ ಬಂದು ಸಮೀಪದ ಶೌಚಾಲಯಕ್ಕೆ ತೆರಳುವ ವೇಳೆ ಕಾಡಾನೆ ದಾಳಿ ನಡೆಸಿ ಕ್ಷಣಾರ್ಧದಲ್ಲಿ ತೋಟದಲ್ಲಿ ಮರೆಯಾಗಿದೆ.

ಕಾಡಾನೆಯ ದಾಳಿಗೆ ಸಿಲುಕಿದ ದೇವರಾಜ್‌ನ ಎರಡು ಕಾಲು ಸೇರಿದಂತೆ ಎದೆ, ಬೆನ್ನು ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಆನೆಯನ್ನು ಕಂಡು ಭಯಭೀತನಾಗಿ ಕಿರುಚಿ ಕೊಂಡಾಗ ಆನೆಯು ಸಮೀಪದ ಕಾಫಿ ತೋಟಕ್ಕೆ ಕಾಲ್ಕಿತ್ತಿದೆ. ಘಟನೆಯಿಂದ ಭಯಭೀತರಾದ ಮನೆ ಮಂದಿ ತೋಟದ ಮಾಲೀಕರಿಗೆ ಮಾಹಿತಿ ತಿಳಿಸಿದರು. ಸುದ್ದಿ ತಿಳಿದ ತೋಟ ಮಾಲೀಕ ಚೆಕ್ಕೆರ ಮಧು ಕಾವೇರಪ್ಪ ಕೂಡಲೇ ಸ್ಥಳಕ್ಕೆ ಆಗಮಿಸಿ ಗಾಯಾಳು ವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಈ ಭಾಗದಲ್ಲಿ ನಿರಂತರ ಕಾಡಾನೆಯ ಸಂಚಾರವಿ ರುವುದರಿಂದ ಜನರು, ಕಾರ್ಮಿಕರು ಓಡಾಡುವುದೇ ಕಷ್ಟವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಗಂಭೀರ ಸ್ವರೂಪದ ಗಾಯ ಗಳಾದ ಕಾರಣ ದೇವರಾಜ್‌ನನ್ನು ಮಡಿಕೇರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಯಿತು.

(ಮೊದಲ ಪುಟದಿಂದ) ಅರಣ್ಯ ಇಲಾಖೆಯ ಆರ್‌ಎಫ್‌ಓ ಕಿರಣ್ ಕುಮಾರ್ ಆಸ್ಪತ್ರೆಗೆ ತೆರಳಿ ದೇವರಾಜ್‌ನ ಆರೋಗ್ಯ ವಿಚಾರಿಸಿದರು. ರೋಗಿಯ ಚಿಕಿತ್ಸಾ ವೆಚ್ಚವನ್ನು ಇಲಾಖೆ ವತಿಯಿಂದ ಭರಿಸುವುದಾಗಿ ಭರವಸೆ ನೀಡಿದರು. ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಸೇರಿ ಆಗಮಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

-ಹೆಚ್.ಕೆ.ಜಗದೀಶ್