ಕಣಿವೆ, ಆ. ೩: ಚರಂಡಿ ಇಲ್ಲದೇ ಮನೆಯ ಹಿಂಬದಿ ಮುಂಬದಿ ತ್ಯಾಜ್ಯ ನೀರಿನ ಗುಂಡಿಗಳ ನಿರ್ಮಾಣ, ಕೇವಲ ಏಳು ಅಡಿಯ ಅವೈಜ್ಞಾನಿಕ ರಸ್ತೆಯಲ್ಲಿ ವಾಹನಗಳ ಚಾಲನೆಗೆ ನಿವಾಸಿಗಳ ಪರದಾಟ, ಕಂಬ ಗಳಿದ್ದರೂ ಕೂಡ ಬೆಳಕು ನೀಡದ ಬೀದಿ ದೀಪಗಳು.
ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯ ಅಂಚಿನಲ್ಲಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಪ್ರಗತಿ ಬಡಾವಣೆ ಚಿತ್ರಣ ಇದಾಗಿದೆ.
ನಿವೇಶನ ಖರೀದಿಸಿ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ನಿವಾಸಿಗಳ ಕಥೆ ನಿಜಕ್ಕೂ ವ್ಯಥೆಯೇ ಆಗಿ ಮಾರ್ಪಟ್ಟಿದೆ. ೨೦ ವರ್ಷಗಳ ಹಿಂದೆ ಈ ದುರ್ಗಮವಾದ ವಸತಿ ಪ್ರದೇಶದಲ್ಲಿ ಕನಿಷ್ಟ ಮೂಲ ಸೌಲಭ್ಯಗಳಾದ ಸಮರ್ಪಕವಾದ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ವಿದ್ಯುತ್ ಕಂಬ ಅಳವಡಿಕೆಗೆ ಸರಿಯಾದ ಸ್ಥಳಾವಕಾಶ ಕಲ್ಪಿಸದಿದ್ದಾಗ ಸಂಬAಧಿತ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಇಲ್ಲಿನ ಮಂದಿಗೆ ವಾಸಕ್ಕೆ ಮನೆಗಳನ್ನು ಕಟ್ಟಲು ಅನುಮತಿ ಬೇಕೆಂದು ಬಂದಾಗ ಪಂಚಾಯಿತಿ ಅಧಿಕಾರಿಗಳು ನಿವಾಸಿಗಳಿಗೆ ಅದು ಯಾವ ರೀತಿ ಕಟ್ಟಡ ಪರವಾನಗಿ ನೀಡಿದರು ಎಂಬುದು ಇದೀಗ ಪ್ರಶ್ನೆಯಾಗಿದೆ. ಅನುಮತಿ ನೀಡಿದ ಮೇಲೆ ಪಂಚಾಯಿತಿಯಿAದ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಲ್ಲವೇ? ಯಾಕಾಗಿ ಒದಗಿಸುತ್ತಿಲ್ಲ? ಎಂದು ಇಲ್ಲಿನ ಮಂದಿ ಪಂಚಾಯಿತಿಯನ್ನು ಕಲ್ಪಿಸದಿದ್ದಾಗ ಸಂಬAಧಿತ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಇಲ್ಲಿನ ಮಂದಿಗೆ ವಾಸಕ್ಕೆ ಮನೆಗಳನ್ನು ಕಟ್ಟಲು ಅನುಮತಿ ಬೇಕೆಂದು ಬಂದಾಗ ಪಂಚಾಯಿತಿ ಅಧಿಕಾರಿಗಳು ನಿವಾಸಿಗಳಿಗೆ ಅದು ಯಾವ ರೀತಿ ಕಟ್ಟಡ ಪರವಾನಗಿ ನೀಡಿದರು ಎಂಬುದು ಇದೀಗ ಪ್ರಶ್ನೆಯಾಗಿದೆ. ಅನುಮತಿ ನೀಡಿದ ಮೇಲೆ ಪಂಚಾಯಿತಿಯಿAದ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಲ್ಲವೇ? ಯಾಕಾಗಿ ಒದಗಿಸುತ್ತಿಲ್ಲ? ಎಂದು ಇಲ್ಲಿನ ಮಂದಿ ಪಂಚಾಯಿತಿಯನ್ನು ಕೆಲವರು ಡೆಂಗ್ಯೂ ಜ್ಬರದಿಂದ ನರಳಿದ್ದಾರೆ. ಇನ್ನೂ ಕೆಲವರು ನರಳುತ್ತಲೇ ಇದ್ದಾರೆ.
ಈ ಬಗ್ಗೆ ಇಲ್ಲಿನ ಕೆಲವು ನಿವಾಸಿಗಳು ನಮಗೆ ಕನಿಷ್ಟ ಚರಂಡಿ ಹಾಗೂ ಇರುವ ಕಿರಿದಾದ ರಸ್ತೆಯನ್ನು ಡಾಂಬರು ಅಥವಾ ಥಾರ್ ರಸ್ತೆಯಾಗಿ ಮಾಡಿಕೊಡಿ ಎಂದು ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳ ಬಳಿಯೂ ತೆರಳಿ ತಮ್ಮ ಸಂಕಟಗಳನ್ನು ತೋಡಿಕೊಂಡಿದ್ದಾರೆ.
ಆದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಮಣಿ, ತ್ಯಾಗರಾಜು, ಮಹದೇವ, ನಾಗಪ್ಪ, ಮಿಲನ್, ನಾಣಯ್ಯ ಹಾಗೂ ರಾಧಾಕೃಷ್ಣ ಮೊದಲಾದವರು "ಶಕ್ತಿ" ಯೊಂದಿಗೆ ದೂರಿಕೊಂಡಿದ್ದು ನಿರ್ದಿಷ್ಟ ಅವಧಿಯೊಳಗೆ ನಮ್ಮ ಬಡಾವಣೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದಲ್ಲಿ ನಿವಾಸಿಗಳೆಲ್ಲರೂ ಪಂಚಾಯಿತಿ ಬಳಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
- ಕೆ.ಎಸ್. ಮೂರ್ತಿ.