ಕುಶಾಲನಗರ, ಆ. ೩: ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘ, ಮತ್ತು ಪ್ರೆಸ್ ಕ್ಲಬ್ ಟ್ರಸ್ಟ್ ಸಹಯೋಗ ದೊಂದಿಗೆ ಕುಶಾಲ ನಗರದಲ್ಲಿ ಪತ್ರಿಕಾ ದಿನಾಚರಣೆ ಆಯೋಗಿಸಲಾಗಿತ್ತು.

ಕರ್ನಾಟಕ ಸರ್ವ ಸಂಪಾದಕರು ಮತ್ತು ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಟಿ.ಮುನಿರಾಜು ಮಾತನಾಡಿ, ಸಮಾಜದ ಏಳಿಗೆಗೆ ಪತ್ರಕರ್ತರು ದುಡಿಯುತ್ತಿರುತ್ತಾರೆ, ಇಂತಹ ಪತ್ರಕರ್ತರಿಗೆ ಮೂಲಭೂತ ಸೌಲಭ್ಯಗಳಾಗಲಿ ಭದ್ರತೆಯಾಗಲಿ ಇರುವುದಿಲ್ಲ, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.

ಸಮಾರAಭದಲ್ಲಿ ಪತ್ರಕರ್ತ ಹೆಚ್.ಟಿ ಅನಿಲ್, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ವೈದ್ಯ ಡಾ. ಭರತ್, ಉದ್ಯಮಿ ಬಿ.ಎಸ್. ಸದಾಶಿವಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ ಪಾಂಡು, ವಕೀಲ ಹಾಗೂ ಸಮಾಜ ಸೇವಕ ಭರತ್ ಮಾಚಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಹೆಚ್. ಎಸ್. ಚೇತನ್, ಕಂದಾಯ ನಿರೀಕ್ಷಕ ಹೆಚ್. ಎಸ್. ಸಂತೋಷ್, ಆಶಾ ಕಾರ್ಯಕರ್ತೆ ಪಿ ಆರ್ ಪ್ರಿಯ, ನೃತ್ಯಪಟು ವಿನುತಾ ಹೇಮಂತೆ ಅವರುಗಳಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಭೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ. ಜಯವರ್ಧನ್, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಸಿನಿಮಾ ಮತ್ತು ಕಿರುತೆರೆ ನಟಿ ಬಿ.ಆರ್. ಅಂಬುಜಾ ಸಿದ್ದರಾಜು , ಉದ್ಯಮಿ ಬಿ.ಎನ್ ಸದಾಶಿವ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ರಾಜ್ಯ ಬೀದಿಬದಿ ವ್ಯಾಪಾರಿ ಸಂಘಟನೆ ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ್, ಟ್ರಸ್ಟ್ ಗೌರವಾದ್ಯಕ್ಷ ಟಿ.ಆರ್. ಪ್ರಭುದೇವ್ ಮತ್ತು ಪದಾಧಿಕಾರಿಗಳು ಇದ್ದರು.