ಬಾಳೆಲೆ, ಆ. ೩: ನಿಟ್ಟೂರು ನ್ಯಾಯ ಬೆಲೆ ಅಂಗಡಿಯ ಕಟ್ಟಡವು ಶಿಥಿಲಗೊಂಡಿದ್ದರಿAದ ಹಾಗೂ ನೆಟ್‌ವರ್ಕ್ ಮತ್ತು ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತಿದ್ದ ಹಿನ್ನೆಲೆಯಲ್ಲಿ ಮತ್ತು ಸುಸಜ್ಜಿತ ಕಟ್ಟಡಕ್ಕೆ ನ್ಯಾಯ ಬೆಲೆ ಅಂಗಡಿಯನ್ನು ಸ್ಥಳಾಂತರಿಸುವAತೆ ಗ್ರಾಹಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕರು ಸ್ಥಳ ಪರಿಶೀಲಿಸಿ ನ್ಯಾಯ ಬೆಲೆ ಅಂಗಡಿಯ ಸ್ಥಳಾಂತರ ಮಾಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ನಿಟ್ಟೂರು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ತಾ. ೧ ರಿಂದ ಸ್ಥಳಾಂತರ ಮಾಡಲಾಗಿದೆ.

ನೂತನ ಕಟ್ಟಡವನ್ನು ಬಾಳೆಲೆ ಎಪಿಸಿಎಂಸ್ ಉಪಾಧ್ಯಕ್ಷೆ ಮುಕ್ಕಾಟಿರ ಜಾನಕಿ ಉದ್ಘಾಟಿಸಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞರಂಡ ಕವಿತಪ್ರಭು, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಪವಿತ, ಅಮ್ಮಣಿ, ಸಾಸು, ಅಮ್ಮಯ್ಯ, ರಾಜು ಗ್ರಾಮದ ಪ್ರಮುಖರಾದ ಕಳ್ಳೇಂಗಡ ಉತ್ತಯ್ಯ, ಮುಕ್ಕಾಟಿರ ಸೋಮಯ್ಯ, ಕಾಟಿಮಾಡ ದೀರಜ್, ಮಲ್ಲೇಂಗಡ ಶಶಿಮಣಿ ಮತ್ತಿತರರು ಹಾಜರಿದ್ದರು.