(ವರದಿ: ವಿಜಯ್ ಹಾನಗಲ್)

ಸೋಮವಾರಪೇಟೆ,ಆ.೩: ಕೊಡಗಿನ ಕೃಷಿ ಇತಿಹಾಸದಲ್ಲಿಯೇ ದೈತ್ಯ ಸಮಸ್ಯೆಯಾಗಿ ಮಾರ್ಪಟ್ಟಿರುವ ಆಫ್ರಿಕನ್ ಶಂಕುಹುಳುವಿನ ಬಾಧೆಯಿಂದಾಗಿ ಉತ್ತರ ಕೊಡಗಿನ ಕೃಷಿಕರ ಬದುಕು ತಲ್ಲಣಗೊಳ್ಳುತ್ತಿದೆ. ಕಳೆದ ೨೦೧೫ರಲ್ಲಿ ಪ್ರಥಮವಾಗಿ ಕಂಡುಬAದ ಈ ಸಮಸ್ಯೆಗೆ ಇಂದಿಗೂ ಶಾಶ್ವತ ಪರಿಹಾರ ಲಭಿಸದ ಹಿನ್ನೆಲೆ ಕೃಷಿಕರು ನೆಮ್ಮದಿ ಕಳೆದುಕೊಂಡಿದ್ದಾರೆ.

ಯಾವದೇ ಕೃಷಿ ಇದ್ದರೂ ದಿನಮಾತ್ರದಲ್ಲಿ ಬಲಿತೆಗೆದುಕೊಳ್ಳುವ ಈ ಶಂಕುಹುಳುಗಳು, ಬೆಳೆದು ನಿಂತ ಕೃಷಿ ಫಸಲು, ಹಸಿರೆಲೆಗಳ ಮೇಲೆ ಧಾಳಿಯಿಟ್ಟು ಸರ್ವನಾಶ ಮಾಡುತ್ತಿವೆ. ಸಾಮೂಹಿಕವಾಗಿ ಪರಿಹಾರ ಕಾರ್ಯ ಕೈಗೊಳ್ಳದ ಹೊರತು ಇದರಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬAತ ಸ್ಥಿತಿ ನಿರ್ಮಾಣವಾಗಿದೆ.

ಬೆಳೆಗಾರರು ಒಗ್ಗೂಡಿ ಕಡಿವಾಣ ಹಾಕದಿದ್ದರೆ ಮುಂದಿನ ಕೆಲ ವರ್ಷಗಳಲ್ಲಿ ಕೊಡಗಿನ ಇತರೆಡೆಗೂ ಈ ಹುಳುಗಳು ವ್ಯಾಪಿಸಿ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅದಕ್ಕೂ ಮುನ್ನವೇ ಕೃಷಿಕರು ಎಚ್ಚೆತ್ತುಕೊಳ್ಳಬೇಕಿದೆ. ಕಾಫಿ ಮಂಡಳಿಯೊAದಿಗೆ ಇತರ ಇಲಾಖೆಗಳೂ ಕೈಜೋಡಿಸಿ ಆಫ್ರಿಕನ್ ದೈತ್ಯ ಶಂಕುಹುಳಗಳಿAದ ಕೃಷಿ ಬೆಳೆಗಳು ಹಾಗೂ ಕೃಷಿಕರ ಬದುಕನ್ನು ರಕ್ಷಿಸಬೇಕಿದೆ.

ಏನಿದು ದೈತ್ಯ ಹುಳು: ಕಳೆದ ೨೦೧೫ರಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆ ಹೋಬಳಿಗೆ ಹೊರಜಿಲ್ಲೆಯಿಂದ ಗೊಬ್ಬರ ಲಾರಿಯ ಮೂಲಕ ಬಂದ ಕೆಲವು ಶಂಕುಹುಳಗಳು ಇದೀಗ ಅಸಂಖ್ಯಾತವಾಗಿ ಬೆಳೆದುಬಿಟ್ಟಿವೆ. ಕೃಷಿವಿರೋಧಿ ಹುಳು ಎಂದೇ ಪರಿಗಣಿಸಲ್ಪಟ್ಟಿರುವ ಈ ಶಂಕುಗಳನ್ನು ನಿರ್ನಾಮ ಮಾಡದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಕೃಷಿಯನ್ನು ಆಪೋಷನ ಮಾಡಲಿವೆ.

ಆಫ್ರಿಕನ್ ದೈತ್ಯ ಶಂಕುಹುಳುಗಳು ಸದ್ಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ, ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ, ಕೆರೆಹಳ್ಳಿ, ಶಿರಂಗಾಲ ಸುತ್ತಮುತ್ತಲ ಸುಮಾರು ೨೫೦ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಕಂಡುಬರುತ್ತಿದ್ದು, ಹಸಿರೆಲೆಗಳು ಒಂದೆರಡು ದಿನಗಳಲ್ಲಿಯೇ ಇವುಗಳ ಆಹಾರವಾಗುತ್ತಿವೆ.

ಮಂಡ್ಯದಿAದ ಬಂದ ಶಂಕುಹುಳು?: ಕಳೆದ ೨೦೧೫ರಲ್ಲಿ ಹಂಡ್ಲಿ ಭಾಗಕ್ಕೆ ಮಂಡ್ಯ ಕಡೆಯಿಂದ ಲಾರಿಯಲ್ಲಿ ಗೊಬ್ಬರ ತರಲಾಗಿದ್ದು, ಇದರೊಳಗೆ ಅಡಗಿದ್ದ ಒಂದೆರಡು ಶಂಕುಹುಳುವನ್ನು ನಿರ್ಲಕ್ಷಿಸಿ ತೋಟದ ಬದಿಯಲ್ಲೇ ಎಸೆದ ಪರಿಣಾಮ ಇಂದು ನೂರಾರು ಬೆಳೆಗಾರರು ಬೆಲೆ ತೆರುವಂತಾಗಿದೆ. ಅಂದು ಕೊಡಗಿನ ನೆಲ ಸೇರಿದ ಆ ಶಂಕುಹುಳುಗಳು ತಮ್ಮ ವಂಶಾಭಿವೃದ್ಧಿ ಮಾಡಿಕೊಂಡು ಇಂದು ಲೆಕ್ಕಕ್ಕೇ ಸಿಗದಷ್ಟು ಬೆಳೆದು ಬೆಳೆಗಾರರ ಬದುಕನ್ನು ಕೊರೆಯುತ್ತಿವೆ ಎಂದು ಸ್ಥಳೀಯ ಕೃಷಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ಐದಾರು ವರ್ಷದಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇವೆ. ಪ್ರಥಮವಾಗಿ ಆಫ್ರಿಕನ್ ದೈತ್ಯ ಶಂಕು ಹುಳುಗಳು ಶನಿವಾರಸಂತೆಯ ಬೆಳ್ಳಾರಳ್ಳಿಯ ಸಮೀಪದ ಕೆಲವು ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದವು. ಈ ವರ್ಷವೂ ಕೂಡ ಇದರ ಬಾಧೆ ಪ್ರಾರಂಭವಾಗಿದ್ದು,

(ಮೊದಲ ಪುಟದಿಂದ) ಕಾಫಿ ಕಾಂಡಗಳ ಸಿಪ್ಪೆ ಹಾಗೂ ಎಲೆಯನ್ನು ತಿನ್ನುವ ಮೂಲಕ ಗಿಡಗಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿದೆ. ಇದರೊಂದಿಗೆ ಬಾಳೆ, ಪಪ್ಪಾಯಿ, ಕರಿಮೆಣಸು, ಕಿತ್ತಳೆ, ಶುಂಠಿ ಕೃಷಿಯ ಮೇಲೆ ಭಾರೀ ಪ್ರಮಾಣದ ಧಾಳಿ ನಡೆಸುತ್ತಿವೆ.

ಮಳೆಗಾಲದಲ್ಲೇ ಹೆಚ್ಚು ಧಾಳಿ: ಬೇಸಿಗೆ ಸಂದರ್ಭ ಮಣ್ಣಿನೊಳಗೆ ಸೇರುವ ದೈತ್ಯ ಹುಳುಗಳು ಮಳೆಗಾಲ ಪ್ರಾರಂಭವಾಗುತ್ತಿದ್ದAತೆ ಮೇಲೆ ಬರುತ್ತವೆ. ಇವುಗಳು ಕಾಫಿ, ಪ್ರತಿ ಮರಗಿಡ, ಶುಂಠಿ, ಕರಿಮೆಣಸು, ಗೆಣಸು, ಗದ್ದೆ ಪೈರು ಸೇರಿದಂತೆ ಎಲ್ಲೆಂದರಲ್ಲಿ ನೆಲೆಕಂಡುಕೊAಡು ಗಿಡಮರದ ಕಾಂಡಗಳನ್ನು ಕೊರೆಯುವುದು, ಹಸಿರೆಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಇವುಗಳು ಒಮ್ಮೆ ಧಾಳಿ ನಡೆಸಿದರೆ ನಂತರ ಆ ಕಾಫಿ ಗಿಡ ಬದುಕುಳಿಯುವದೇ ಇಲ್ಲ. ಎರಡು ದಶಕಗಳ ಕಾಲ ಆರೈಕೆ ಮಾಡಿಕೊಂಡು ಬಂದಿದ್ದ ಕಾಫಿ ಗಿಡಗಳು ಶಂಕುಹುಳುವಿನ ಬಾಧೆಗೆ ಒಳಗಾಗಿ ಕಣ್ಣೆದುರೇ ನಾಶವಾಗುವದನ್ನು ನೋಡುವ ದುರ್ದೈವ ಈ ಭಾಗದ ಬೆಳೆಗಾರರಿಗೆ ಒದಗಿ ಬಂದಿದೆ.

ಇದೀಗ ಅತೀ ಹೆಚ್ಚು ಕಾಣಸಿಗುತ್ತಿರುವ ಈ ಹುಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿರುತ್ತದೆ ಮತ್ತು ಹಗಲಿನ ವೇಳೆ ಮರಗಳ ಮೇಲೆ, ಬಿದ್ದಿರುವ ರೆಂಬೆ ಕೊಂಬೆಗಳ ಮೇಲೆ, ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತವೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತದೆ. ಇದು ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ, ನರ್ಸರಿ ಗಿಡಗಳು ಸೇರಿದಂತೆ ೫೦೦ ಕ್ಕೂ ಹೆಚ್ಚು ಸಸ್ಯಗಳಿಗೆ ಹಾನಿ ಮಾಡುತ್ತದೆ. ಇದರ ಜೀವಿತಾವಧಿ ೩-೫ ವರ್ಷಗಳಾಗಿದ್ದು, ಕೆಲವು ಹುಳುಗಳು ೯ ವರ್ಷಗಳವರೆಗೂ ಜೀವಿಸುತ್ತವೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಯಾಚ್ ಅಂಡ್ ಕಿಲ್ ಮಾತ್ರ ದಾರಿ: ಇದೀಗ ಹಂಡ್ಲಿ, ಬೆಳ್ಳಾರಳ್ಳಿ, ಶಿರಂಗಾಲ, ಕೆರೆಹಳ್ಳಿ ಗ್ರಾಮ ವ್ಯಾಪ್ತಿಯ ೨೫೦ಕ್ಕೂ ಅಧಿಕ ಏಕರೆ ಕೃಷಿ ಪ್ರದೇಶ ಈ ಹುಳುವಿನ ಬಾಧೆಗೆ ಒಳಗಾಗಿದೆ. ಕಳೆದ ೨೦೧೬ರಲ್ಲಿ ಸುಮಾರು ೫೦ ಏಕರೆ ಪ್ರದೇಶಕ್ಕೆ ವ್ಯಾಪ್ತಿಸಿದ ಹುಳುಗಳ ಹಾವಳಿ ಇಂದು ೨೫೦ ಏಕರೆಗೆ ವಿಸ್ತರಿಸಿದೆ. ಒಂದು ಹುಳು ಸಾಮಾನ್ಯವಾಗಿ ೧೦೦ರಿಂದ ೧೫೦ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಗಂಡು ಹಾಗೂ ಹೆಣ್ಣಿನ ಅಂಶಗಳು ಒಂದೇ ಹುಳದಲ್ಲಿ ಕಾಣಸಿಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇವುಗಳ ಸಂತಾನೋತ್ಪತ್ತಿಯೂ ಶೀಘ್ರವಾಗಿದ್ದು, ಹುಳುಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಇದಕ್ಕೆ ಪರಿಹಾರ ಒಂದೇ ‘ಕ್ಯಾಚ್ ಅಂಡ್ ಕಿಲ್’! ಎಲ್ಲಾ ಹುಳುಗಳನ್ನು ಹಿಡಿದು ನಂತರ ಸಾಯಿಸುವದೇ ಇದಕ್ಕೆ ಉಳಿದಿರುವ ಪರಿಹಾರ. ಇನ್ನಿತರ ಯಾವುದೇ ಕೀಟನಾಶಕದಿಂದ ಇದರ ನಿರ್ಮೂಲನೆ ಪರಿಣಾಮಕಾರಿಯಾಗಿ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದು, ಅದರಂತೆ ಕಳೆದ ೨೦೧೭ರಲ್ಲಿ ೨೫ ಟನ್‌ಗೂ ಅಧಿಕ ಶಂಕುಹುಳುಗಳನ್ನು ಹಿಡಿದು ಸಾಯಿಸಲಾಗಿದೆ!

ನಂತರ ೨೦೧೮ ಹಾಗೂ ೨೦೧೯ರಲ್ಲಿ ಒಂದಿಷ್ಟು ಹುಳುಗಳನ್ನು ಹಿಡಿದು ನಾಶಪಡಿಸಲಾಗಿತ್ತು. ಆದರೆ ೨೦೨೦ರ ಕೊರೊನಾ ವರ್ಷದಲ್ಲಿ ಶಂಕುಹುಳುಗಳ ಬಗ್ಗೆ ನಿರ್ಲಕ್ಷö್ಯ ವಹಿಸಿದ ಹಿನ್ನೆಲೆ ಮತ್ತೆ ಅವುಗಳ ಉಪಟಳ ಆರಂಭವಾಗಿದೆ. ಸುಧಾರಣಾ ಕ್ರಮಗಳನ್ನು ನಿರಂತರವಾಗಿ ನಾಲ್ಕೆöÊದು ವರ್ಷ ನಿರ್ವಹಿಸಿದರೆ ಇವುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ತಜ್ಞರು ಅಭಿಪ್ರಾಯಿಸಿದ್ದಾರೆ.

ಬೆಳ್ಳಾರಳ್ಳಿ ಗ್ರಾಮದ ಮಲ್ಲಿಕಾರ್ಜುನ, ಷಣ್ಮುಖಯ್ಯ, ಪ್ರದೀಪ್, ಪವನ್, ರವಿಕುಮಾರ್, ಶಿವರಾಜ್, ಹಂಡ್ಲಿ ಗ್ರಾಮದ ವೇದಕುಮಾರ್ ಹಾಗೂ ವಿಜಯಕುಮಾರ್ ಅವರುಗಳಿಗೆ ಸೇರಿದ ಕಾಫಿ ತೋಟ, ಕೆರೆಹಳ್ಳಿ ನಾಗರಾಜು, ಕಾಂತರಾಜು, ಆಕಾಶ್ ಅವರುಗಳಿಗೆ ಸೇರಿದ ಗದ್ದೆ ಹಾಗೂ ಕಾಫಿ ತೋಟಗಳಲ್ಲಿ ಹೆಚ್ಚಾಗಿ ಕಂಡುಬAದಿರುವ ಈ ಹುಳುಗಳು ಕೃಷಿಯನ್ನು ಭಾಗಶಃ ನಾಶಪಡಿಸಿವೆ. ಈ ಭಾಗದ ಗದ್ದೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆಗಾರರು ದಿನನಿತ್ಯ ಆತಂಕದ ಕ್ಷಣಗಳನ್ನೇ ಎದುರಿಸುತ್ತಿದ್ದಾರೆ. ಕೃಷಿ ಕಾರ್ಯ ಬಿಟ್ಟು ಹುಳುಗಳನ್ನು ಸಂಗ್ರಹಿಸುವದೇ ಕಾಯಕವಾಗಿದೆ ಎಂದು ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷö್ಮಣ್ ತಿಳಿಸಿದ್ದಾರೆ.

ಶಂಕುಹುಳುಗಳು ಅಂಟಿನ ದ್ರವವನ್ನು ಒಳಗೊಂಡಿದ್ದು, ಇವುಗಳು ಕೈಯಿಂದ ಮುಟ್ಟಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಕೂಲಿ ನೀಡಿ ಕಾರ್ಮಿಕರ ಮನವೊಲಿಸಿ ಕೆಲಸ ಮಾಡಿಸಿಕೊಳ್ಳಬೇಕಿದೆ. ಕೆಲವೊಮ್ಮೆ ನಮ್ಮ ತೋಟವನ್ನು ರಕ್ಷಿಸಿಕೊಳ್ಳಲು ಅನ್ಯ ಮಾರ್ಗವಿಲ್ಲದೇ ನಾವುಗಳೇ ಶಂಕುಹುಳುಗಳನ್ನು ಹಿಡಿಯುತ್ತಿದ್ದೇವೆ ಎಂದು ಬೆಳೆಗಾರರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಒಟ್ಟಾರೆ ಹುಳುಗಳನ್ನು ಕ್ಯಾಚ್ ಅಂಡ್ ಕಿಲ್ ಮೂಲಕವೇ ನಿಯಂತ್ರಿಸಬೇಕು ಎಂದು ಕಾಫಿ ಮಂಡಳಿಯ ತಜ್ಞರು ತಿಳಿಸಿದ್ದಾರೆ. ಈ ಭಾಗದ ಕೃಷಿಕರ ಜೀವನಾಧಾರವಾಗಿರುವ ಕಾಫಿ, ಬಾಳೆ, ಕರಿಮೆಣಸು, ತರಕಾರಿ ಬೆಳೆಗಳನ್ನು ಶಂಕುಹುಳುಗಳಿAದ ರಕ್ಷಿಸಿಕೊಳ್ಳಲು ಬೆಳೆಗಾರರು ಹೆಣಗಾಡುತ್ತಿದ್ದಾರೆ. ಈಗಾಗಲೇ ೩೦೦ ಏಕರೆಗೂ ಅಧಿಕ ಪ್ರದೇಶದಲ್ಲಿ ಶಂಕುಹುಳುಗಳು ಕಂಡುಬAದಿದ್ದು, ಇವುಗಳ ನಿರ್ಮೂಲನೆಗೆ ಅವಶ್ಯವಿರುವ ಔಷಧಿ ಕಿಟ್‌ಗಳನ್ನು ನೀಡುವಂತೆ ನಮ್ಮ ಬೆಳೆಗಾರರ ಸ್ವಸಹಾಯ ಸಂಘವು ಕಾಫಿ ಮಂಡಳಿಗೆ ಮನವಿ ಸಲ್ಲಿಸಿದೆ.