ಕಂಚಿನ ಪದಕಕ್ಕೆ ನಾಳೆ ಹಣಾಹಣಿ

ಟೋಕಿಯೋ, ಆ. ೩: ಭಾರತ ಪುರುಷರ ಹಾಕಿ ತಂಡ ಕಳೆದ ಒಲಂಪಿಕ್ಸ್ನ ಬೆಳ್ಳಿ ಪದಕ ವಿಜೇತ ಬೆಲ್ಜಿಯಮ್ ವಿರುದ್ಧ ಇಂದು ನಡೆದ ಒಲಂಪಿಕ್ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ೨-೫ ಗೋಲ್‌ಗಳಿಂದ ಸೋಲು ಅನುಭವಿಸಿತು. ಪಂದ್ಯದ ೨ನೇ ನಿಮಿಷದಲ್ಲಿಯೇ ಗೋಲು ಭಾರಿಸಿದ ಬೆಲ್ಜಿಯಮ್ ಮುನ್ನಡೆ ಪಡೆಯಿತು. ಮೊದಲನೆಯ ಕ್ವಾರ್ಟರ್ ಅಂತ್ಯದೊಳಗೆ ಭಾರತ ೨ ಗೋಲು ಭಾರಿಸುವ ಮೂಲಕ ಮುನ್ನಡೆ ಪಡೆದುಕೊಂಡಿತು. ಇದಾದ ಬಳಿಕ ಬೆಲ್ಜಿಯಮ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು ಒಟ್ಟು ೫ ಗೋಲುಗಳನ್ನು ಭಾರಿಸಿ ಫೈನಲ್‌ಗೆ ಪ್ರವೇಶಿಸಿತು.

ಮತ್ತೊಂದು ಸೆಮಿಫೈನಲ್‌ನಲ್ಲಿ ಆಸ್ಟೆçÃಲಿಯಾ ತಂಡ ಜರ್ಮನಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ. ಬೆಲ್ಜಿಯಮ್ ತಂಡ ಫೈನಲ್‌ಗೆ ಪ್ರವೇಶಿಸಿದ್ದು ತಾ. ೫ ರಂದು (ನಾಳೆ) ಆಸ್ಟೆçÃಲಿಯಾ ವಿರುದ್ಧ ಫೈನಲ್‌ನಲ್ಲಿ ಸ್ಪರ್ಧಿಸಲಿದೆ. ಭಾರತ ಕಂಚಿನ ಪದಕಕ್ಕೆ ಜರ್ಮನಿ ವಿರುದ್ಧ ಸ್ಪರ್ಧಿಸಲಿದೆ.

ಇಂದು ಮಹಿಳೆಯರ ಹಾಕಿ ಸೆಮಿಫೈನಲ್

ಭಾರತ ಮಹಿಳೆಯರ ಹಾಕಿ ತಂಡದ ಸೆಮಿಫೈನಲ್ ಪಂದ್ಯಾಟ ತಾ.೪ ರಂದು (ಇಂದು) ಅರ್ಜಂಟೀನಾ ವಿರುದ್ಧ ಮಧ್ಯಾಹ್ನ ೩:೩೦ ಗೆ ನಡೆಯಲಿದೆ.