ಮಡಿಕೇರಿ, ಆ. ೩: ಮಡಿಕೇರಿಯ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಸ್ಥೆಯಲ್ಲಿ ಅಗತ್ಯ ವಿರುವ ಮಕ್ಕಳಿಗೆ ಪಠ್ಯೋಪಯೋಗಿ ಪರಿಕರಗಳನ್ನು ನೀಡಲಾಯಿತು.
ಶಾಲಾ ಸಭಾಂಗಣದಲ್ಲಿ ಆಯೋಜಿತ ಸರಳ ಸಮಾರಂಭದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ೩೦ ವಿದ್ಯಾರ್ಥಿಗಳಿಗೆ ಕೊಡೆ, ಫ್ಲಾಸ್ಕ್,ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ಮಣವಟ್ಟೀರ ಗಂಗಮ್ಮ, ಸಂತ ಜೊಸೇಫರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶಾಲೆಗೆ ತಮ್ಮ ಕೊಡುಗೆ ನೀಡುವ ಉದ್ದೇಶದಿಂದ ೨೨ ವರ್ಷಗಳ ಹಿಂದೆ ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿದ್ದು ಅನೇಕ ಕಾರ್ಯಕ್ರಮ ಗಳನ್ನು ಸಂಘದ ವತಿಯಿಂದ ಕೈಗೊಳ್ಳಲಾಗಿದೆ. ಇದೀಗ ಶಿಕ್ಷಣ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳ ಬೇಡಿಕೆ ಗಮನಿಸಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವೆಚ್ಚದಲ್ಲಿ ತಲಾ ೧ ಸಾವಿರ ಮೌಲ್ಯದ ಪಠ್ಯೋಪಯೋಗಿ ಪರಿಕರಗಳನ್ನು ನೀಡ ಲಾಗಿದೆ. ಸಂಘದ ಅಧ್ಯಕ್ಷೆ ಚೆಕ್ಕೇರ ಶಶಿ ಉತ್ತಪ್ಪ, ಉಪಾಧ್ಯಕ್ಷೆ ಕಳ್ಳಿಚಂಡ ಅಕ್ಕಮ್ಮ, ಕಾರ್ಯದರ್ಶಿ ಮೂಕಚಂಡ ಬೊಳ್ಳಮ್ಮ ಅವರ ನೇತೃತ್ವದಲ್ಲಿ ಸದಸ್ಯರಿಂದ ಆರ್ಥಿಕ ನೆರವನ್ನು ಸಂಗ್ರಹಿಸಲಾಯಿತು. ಶಿಕ್ಷಣ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಸೂಕ್ತ ಪಠ್ಯೋಪಕರಣ ಪಡೆಯಲು ಆರ್ಥಿಕ ಚೈತನ್ಯ ಇಲ್ಲದವರನ್ನು ಆದ್ಯತೆಯಂತೆ ಗಮನಿಸಿ ಈ ಕೊಡುಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಂತ ಜೋಸೆಫರ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಅಂತೋಣಿಯಮ್ಮ, ರೋಜಾ ಈ ಸಂದರ್ಭ ಶಿಕ್ಷಣದ ಮಹತ್ವ ಮತ್ತು ದಾನಿಗಳು ನೀಡಿದ ಪರಿಕರಗಳ ಸೂಕ್ತ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಕ್ಷಕ ವೃಂದ ದವರು ಹಾಜರಿದ್ದ ಕಾರ್ಯಕ್ರಮ ದಲ್ಲಿ ಶಿಕ್ಷಕಿ ಸ್ವರೂಪ ಪ್ರಾರ್ಥಿಸಿ ದರು. ಫಲಾನುಭವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಂದರ್ಭ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.