ನಾಪೋಕ್ಲು, ಆ. ೩: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ಬೆಟ್ಟಗೇರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಸಂಘಗಳಿಗೆ ಚೆಕ್ ವಿತರಿಸಿದರು. ಧರ್ಮಸ್ಥಳ ಸಂಘದ ಮೇಲ್ವಿಚಾರಕ ಸಂತೋಷ್ರವರು ಮಾತನಾಡಿದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷೆ ಪದ್ಮವೇಣಿ, ಪದಾಧಿಕಾರಿಗಳಾದ ಜಯಂತಿ, ಸರಿತಾ, ಬೆಟ್ಟಗೇರಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಗೌರಮ್ಮ ಮತ್ತು ತಂಡದ ಸದಸ್ಯರು ಇದ್ದರು.