ಮಡಿಕೇರಿ, ಆ. ೨: ಮಲ್ಪೆ ಸಮುದ್ರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ.

ಮೂಲತಃ ಅಮ್ಮತ್ತಿ ಹೊಸೂರಿನ ಉದ್ದಪಂಡ ಜಗತ್ ಹಾಗೂ ರತಿ ದಂಪತಿಯ ಪುತ್ರಿ ದೇಚಮ್ಮ (ದಶಮಿ-೨೧) ಮಲ್ಪೆ ಸಮುದ್ರದಲ್ಲಿ ದುರಂತಕ್ಕೆ ಸಿಲುಕಿ ತಾ. ೧ ರಂದು ಸಾವನ್ನಪ್ಪಿದ್ದ ಯುವತಿ. ತನ್ನ ಸ್ನೇಹಿತರೊಂದಿಗೆ ಉಡುಪಿಗೆ ತೆರಳಿದ್ದ ದೇಚಮ್ಮ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಪೊಲೀಸರು, ರಕ್ಷಣಾ ತಂಡ ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರು ಯುವತಿಯ ದೇಹ ಪತ್ತೆಯಾಗಿರಲಿಲ್ಲ.

ತಾ. ೨ರ ಬೆಳಿಗ್ಗೆ ೭.೩೦ರ ವೇಳೆಗೆ ಮಲ್ಪೆಯಿಂದ ೧.೫ ಕಿ.ಮೀ ದೂರದಲ್ಲಿರುವ ಸೀವಾಕ್ ಎಂಬ ಸ್ಥಳದಲ್ಲಿ ಕಾರ್ಯಾಚರಣೆ ಸಂದರ್ಭ ಮೃತದೇಹ ಪತ್ತೆಯಾಗಿದೆ. ಉಡುಪಿಯಲ್ಲಿ ಮರಣೋತ್ತರ

ಪರೀಕ್ಷೆ ನಡೆಸಿ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸAಸ್ಕಾರ ನೆರವೇರಿಸಲಾಯಿತು.