ಮಡಿಕೇರಿ, ಆ. ೨: ಕೋವಿಡ್ ೧೯ನಿಂದ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ನೆರವಾಗುವಲ್ಲಿ ಕಾರ್ಮಿಕ ಇಲಾಖೆ ಅಗತ್ಯ ನೆರವು ನೀಡಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಮಾಹಿತಿ ನೀಡಿದ್ದಾರೆ. ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಬAಧಿತ ನೋಂದಾಯಿತ ಕಾರ್ಮಿಕರಿಗೆ ೪ ಸಾವಿರ ಆಹಾರ ಕಿಟ್ಗಳನ್ನು ಒದಗಿಸಲಾಗಿದೆ. ೩ ಸಾವಿರ ಮಾಸ್ಕ್, ಸ್ಯಾನಿಟೈಸರ್ ಮತ್ತಿತರವನ್ನು ಒಳಗೊಂಡ ಸುರಕ್ಷತಾ ಕಿಟ್ಗಳನ್ನು ಒದಗಿಸಲಾಗಿದೆ.
ನೋಂದಾಯಿತ ಆರ್ಥಿಕ ಸಂಕಷ್ಟದಲ್ಲಿರುವ ೨೯೧೪ ಕಾರ್ಮಿಕರಿಗೆ ತಲಾ ರೂ. ೩ ಸಾವಿರ ದಂತೆ ಒಟ್ಟು ರೂ ೮೭.೪೨ ಲಕ್ಷ ಕೋವಿಡ್ ಪರಿಹಾರ ಮೊತ್ತ ಮಂಜೂರು ಮಾಡಲಾಗಿದೆ. ಅಸಂಘಟಿತ ೧೧ ವಲಯದ ಒಟ್ಟು ೨೪೧೮ ಕಾರ್ಮಿಕರಿಗೆ ಕೋವಿಡ್ ಪರಿಹಾರ ಮೊತ್ತವಾಗಿ ತಲಾ ೨ ಸಾವಿರ ದಂತೆ ಒಟ್ಟು ೪೮.೩೬ ಲಕ್ಷ ರೂ ಮಂಜೂರು ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬಡ ಕುಟುಂಬಗಳಿಗೆ ಆಹಾರ ಪೂರೈಕೆ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು ಹೀಗೆ ಸಂಕಷ್ಟದಲ್ಲಿದ್ದವರಿಗೆ ಪರಿಹಾರ ಧನ ವಿತರಣೆ ಮಾಡಲಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜೂನ್-೨೦೨೧ ರ ಅಂತ್ಯದವರೆಗೆ ಒಟ್ಟು ೭೧೬೧ ಫಲಾನುಭವಿಗಳು ನೋಂದಾಯಿಸಿಕೊAಡಿದ್ದು, ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ೨೦೧೯-೨೦ನೇ ಸಾಲಿನಲ್ಲಿ ಒಂದು ಬಾರಿ ಸಹಾಯಧನವನ್ನು ನೊಂದಾಯಿತ ೨೨೭೨ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಪರಿಹಾರ ಮೊತ್ತ ೫ ಸಾವಿರ ರೂ. ನೀಡಲಾಗಿದೆ. ೨೦೨೦-೨೧ ನೇ ಸಾಲಿನಲ್ಲಿ ಒಂದು ಬಾರಿ ಸಹಾಯಧನವನ್ನು ನೊಂದಾಯಿತ ೨೯೧೪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಪರಿಹಾರ ಮೊತ್ತ ೩೦೦೦ ಗಳನ್ನು ನೀಡಲಾಗಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವಿವಿಧ ವಲಯಗಳ ಕಾರ್ಮಿಕರು ಆನ್ ಲೈನ್ನಲ್ಲಿ ನೋಂದಾಯಿಸಿಕೊAಡಿರುವ ಫಲಾನುಭವಿಗಳ ಸಂಖ್ಯೆ ೩೪೪೦ ಆಗಿರುತ್ತದೆ. ೨೦೧೯-೨೦ನೇ ಸಾಲಿನಲ್ಲಿ ಒಂದು ಬಾರಿ ಸಹಾಯಧನವನ್ನು ನೊಂದಾಯಿತ ಅಸಂಘಟಿತ ಕೋವಿಡ್ ಪರಿಹಾರ ಮೊತ್ತ ೩ ಸಾವಿರ ರೂ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.