ಮಡಿಕೇರಿ, ಆ. ೨: ಬೋಯಿಕೇರಿ ಸಮೀಪ ನಡೆದ ಅಪಘಾತದ ಪ್ರಕರಣವೊಂದು ಸಂಘರ್ಷವಾಗಿ ಮಾರ್ಪಡಲು ಕೊಡಗು ಪೊಲೀಸರ ವೈಫಲ್ಯವೇ ಕಾರಣವೆಂದು ಆರೋಪಿಸಿರುವ ಎಐಸಿಸಿ ವಕ್ತಾರ ಹಾಗೂ ವಕೀಲ ಬ್ರಿಜೇಶ್ ಕಾಳಪ್ಪ, ಉಭಯ ಕಡೆ ಗಳಿಂದಲೂ ದೂರು ದಾಖಲಾಗಿರು ವುದರಿಂದ ಘಟನೆ ಕುರಿತು ಸ್ಥಳೀಯ ಪೊಲೀಸರನ್ನು ಹೊರಗಿಟ್ಟು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬೋಯಿಕೇರಿಯಲ್ಲಿ ಅಪಘಾತ ನಡೆದಾಗ ಗುಂಪೊAದು ಬಂದು ಹಲ್ಲೆ ನಡೆಸಿತು ಎಂದು ಆರೋಪಿಸ ಲಾಗಿದೆ. ಎಲ್ಲಿಂದಲೋ ಮಾಹಿತಿ ದೊರೆತು ಗುಂಪು ತಕ್ಷಣ ಸ್ಥಳಕ್ಕೆ ಆಗಮಿಸುತ್ತದೆ ಎಂದಾದರೆ ಪೊಲೀಸರು ಏನು ಮಾಡುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿ ರುವ ಅವರು, ಗುಂಪು ಸಂಘರ್ಷಕ್ಕೂ ಮೊದಲು ಪೊಲೀಸರು ತಲುಪಿದ್ದರೆ ಸಣ್ಣ ಪ್ರಕರಣವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರ ಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆಯಲ್ಲಿ ನಡೆದ ರಾಯ್ ಡಿಸೋಜ ಸಾವಿನ ಪ್ರಕರಣದ ಸಂದರ್ಭವೇ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕಾಗಿತ್ತು. ಆದರೆ ಇಂದಿಗೂ ಆರೋಪಿಗಳು ನಿರಾತಂಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ಮೇಲೆ ರಾಜಕೀಯ ಒತ್ತಡವಿದೆ, ಸ್ಥಳೀಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯವೆಂದು ಟೀಕಿಸಿರುವ ಅವರು, ಬೋಯಿಕೇರಿ ಅಪಘಾತ ಪ್ರಕರಣ ವನ್ನು ಹಿರಿಯ ಅಧಿಕಾರಿಯೊಬ್ಬರಿಗೆ ಒಪ್ಪಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.