ಕುಡೆಕಲ್ ಸಂತೋಷ್

ಮಡಿಕೇರಿ, ಜು. ೨೯: ಕೋವಿಡ್ ಮಹಾಮಾರಿಯಿಂದಾಗಿ ಸಂಪೂರ್ಣ ಲಾಕ್‌ಡೌನ್‌ನಿಂದ ವಿಮುಕ್ತಗೊಂಡು ರಾಜ್ಯಾದ್ಯಂತ ಇದೀಗ ಎಲ್ಲ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿವೆ., ಅಂಗಡಿ-ಮಳಿಗೆ, ಮಾರುಕಟ್ಟೆ, ಸಿನಿಮಾ ಮಂದಿರಗಳು ಎಲ್ಲವೂ ಸಾರ್ವಜನಿಕರಿಗೆ ಮುಕ್ತವಾಗಿವೆ., ಈ ನಡುವೆ ಶಾಲೆಗಳು ತೆರೆದಿದ್ದು, ಪದವಿ ಕಾಲೇಜುಗಳು ಆರಂಭಗೊAಡಿವೆ., ಆದರೆ, ಪಟ್ಟಣಕ್ಕೆ ತೆರಳಲು ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲವಾಗಿದೆ., ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಸಾರ್ವಜನಿಕರು ಪರದಾಡುವಂತಾಗಿದೆ.

ಸರಕಾರ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಿಕೆ ಮಾಡಿ ಎಲ್ಲದಕ್ಕೂ ಮುಕ್ತ ಅವಕಾಶ ನೀಡಿದೆ. ಅಂತೆಯೇ ಸಾರಿಗೆ ಬಸ್‌ಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪ್ರಮುಖ ಪಟ್ಟಣಗಳು ಹಾಗೂ ನಗರ ಪ್ರದೇಶಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಲಿವೆ. ಗ್ರಾಮೀಣ ಪ್ರದೇಶಗಳಿಗೂ ಸರಕಾರೀ ಕಚೇರಿ ವೇಳೆಗನುಗುಣವಾಗಿ ಸಮಯಕ್ಕೆ ಸರಿಯಾಗಿ ಮಾತ್ರ ಬಸ್‌ಗಳು ಸಂಚರಿಸುತ್ತಿವೆ. ಈ ನಡುವೆ ಇದೀಗ ಸಾರ್ವಜನಿಕರ ಬೇಡಿಕೆಯಂತೆ ಬೇಡಿಕೆ ಸಲ್ಲಿಸಿರುವ ಕಡೆಗಳಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಯ ಮೂಲೆ ಮೂಲೆಗಳಿಗೂ ಸಂಚರಿಸುತ್ತಾ ಸೇವೆ ಸಲ್ಲಿಸುತ್ತಿರುವ ಖಾಸಗಿ ಬಸ್‌ಗಳು ಮಾತ್ರ ಇನ್ನೂ ರಸ್ತೆಗಿಳಿದಿಲ್ಲ. ಲಾಕ್‌ಡೌನ್ ಸಮಯದಲ್ಲಿ ಶರಣಾಗತಿ ಮಾಡಲಾಗಿರುವ ಬಸ್‌ಗಳು ಸಂಚಾರ ಆರಂಭಿಸಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಪ್ರಯಾಣಿಸಲು ಪರದಾಡುವಂತಾಗಿದೆ.

ವಿದ್ಯಾರ್ಥಿಗಳಿಗೆ ತೊಂದರೆ

ಈಗಾಗಲೇ ಸರಕಾರದ ನಿರ್ದೇಶನದಂತೆ ಹತ್ತನೇ ತರಗತಿ ಪರೀಕ್ಷೆ ನಡೆಸಲಾಗಿದ್ದು, ಸದ್ಯದಲ್ಲೇ ಫಲಿತಾಂಶ ಪ್ರಕಟಗೊಳ್ಳಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗಿದೆ. ಇದರೊಂದಿಗೆ ಕಳೆದ ತಾ.೨೬ರಿಂದ ಪದವಿ ತರಗತಿಗಳು ಆರಂಭಗೊAಡಿದ್ದು, ಪ್ರಥಮ ಪದವಿ ಹಾಗೂ ಪ್ರಥಮ ಪಿಯುಸಿ ಸೇರ್ಪಡೆಗೆ ಪ್ರವೇಶಾತಿ

(ಮೊದಲ ಪುಟದಿಂದ) ಕೂಡ ಆರಂಭಗೊAಡಿದೆ. ಆದರೆ, ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೆ ಶಾಲಾ-ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಪದವಿ ಪರೀಕ್ಷೆಗಳು ಮುಂದಿನ ವಾರದಿಂದ ಆರಂಭಗೊಳ್ಳಲಿದೆ. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಪಡೆಯುವದು ಕಡ್ಡಾಯವಾಗಿದ್ದು, ಈಗಾಗಲೇ ಬಹಳಷ್ಟು ವಿದ್ಯಾಥಿಗಳು ಖಾಸಗಿ, ಬಾಡಿಗೆ ವಾಹನಗಳಲ್ಲಿ ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನೂ ಕೂಡ ಬಾಕಿಯಿದ್ದು, ವಾಹನದ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ.

ಗ್ರಾಮೀಣ ಸಾರಿಗೆಗೆ ಬೇಡಿಕೆ

ಪ್ರಮುಖ ಪಟ್ಟಣ ಹಾಗೂ ನಗರ ಪ್ರದೇಶಗಳಿಂದ ಬರುವವರಿಗೆ (ಮೊದಲ ಪುಟದಿಂದ) ಕೂಡ ಆರಂಭಗೊAಡಿದೆ. ಆದರೆ, ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೆ ಶಾಲಾ-ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಪದವಿ ಪರೀಕ್ಷೆಗಳು ಮುಂದಿನ ವಾರದಿಂದ ಆರಂಭಗೊಳ್ಳಲಿದೆ. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಪಡೆಯುವದು ಕಡ್ಡಾಯವಾಗಿದ್ದು, ಈಗಾಗಲೇ ಬಹಳಷ್ಟು ವಿದ್ಯಾಥಿಗಳು ಖಾಸಗಿ, ಬಾಡಿಗೆ ವಾಹನಗಳಲ್ಲಿ ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನೂ ಕೂಡ ಬಾಕಿಯಿದ್ದು, ವಾಹನದ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ.

ಗ್ರಾಮೀಣ ಸಾರಿಗೆಗೆ ಬೇಡಿಕೆ

ಪ್ರಮುಖ ಪಟ್ಟಣ ಹಾಗೂ ನಗರ ಪ್ರದೇಶಗಳಿಂದ ಬರುವವರಿಗೆ ಅವಲಂಬಿತರಾಗಿರುವ ಗ್ರಾಮೀಣ ಭಾಗದ ಶಿಕ್ಷಕರು ಪ್ರತಿನಿತ್ಯ ರಸ್ತೆ ಬದಿಯಲ್ಲಿ ಯಾವದಾದರೂ ವಾಹನಗಳಿಗಾಗಿ ಕಾದು ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗಕ್ಕೆ ಗ್ರಾಮೀಣ ಸಾರಿಗೆ ವ್ಯವಸ್ಥೆ ಮಾಡಿದರೆ ಅನುಕೂಲಕರವಾಗಲಿದೆ ಎಂಬ ಬೇಡಿಕೇಯೂ ಕೇಳಿಬರುತ್ತಿದೆ.

ಈ ನಡುವೆ ಕೆಲವು ಕಡೆಗಳಲ್ಲಿ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿವೆ. ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ.