ಮಡಿಕೇರಿ, ಜು. ೩೧: ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೆಂಬೆಬೆಳ್ಳೂರು, ಹಾಲುಗುಂದ, ಬೈರಂಬಾಡ, ಯಡೂರು, ಹಚ್ಚಿನಾಡು, ಪಚ್ಚಾಟ, ಕಣ್ಣಂಗಾಲ, ಗುಹ್ಯ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ತಾ. ೨ರಂದು ಹಮ್ಮಿಕೊಂಡಿದ್ದು, ತೋಟದ ಕಾರ್ಮಿಕರು ಆ ದಿನ ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಲಯ ಅರಣ್ಯ ಅಧಿಕಾರಿಗಳಾದ ಕೆ.ಎಂ. ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.