ಮಡಿಕೇರಿ, ಜು. ೩೧: ನಗರದ ಮಾರುಕಟ್ಟೆ ಬಳಿ ಅಪಘಾತ ಕ್ಕೊಳಗಾಗಿ ಗಾಯಗೊಂಡಿದ್ದ ಕರುವೊಂದನ್ನು ರಕ್ಷಣೆ ಮಾಡಲಾಯಿತು. ಗಾಯ ಗೊಂಡಿದ್ದ ಕರುವನ್ನು ಸಾರ್ವಜನಿಕರ ಮೂಲಕ ಮಾರುಕಟ್ಟೆ ಕಟ್ಟಡಕ್ಕೆ ಕರೆತರಲಾಗಿದ್ದು, ಪಶುವೈದ್ಯರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಪಶುವೈದ್ಯರು ಕರುವಿಗೆ ಚಿಕಿತ್ಸೆ ನೀಡಿದರು. ಮಾರುಕಟ್ಟೆ ಕಟ್ಟಡದಲ್ಲೇ ಚೇತರಿಸಿಕೊಳ್ಳುತ್ತಿರುವ ಕರುವಿಗೆ ಸಾರ್ವಜನಿಕರು ಆಹಾರ ನೀಡುತ್ತಿದ್ದಾರೆ. ಕರು ರಕ್ಷಣೆಯಲ್ಲಿ ಉಮೇಶ್ ಕುಮಾರ್, ಸತ್ಯ ಕರ್ಕೆರ, ಹೇಮಂತ್, ಕವನ್ ಪಾಣತ್ತಲೆ, ಪ್ರದೀಪ್ ಕರ್ಕೆರಾ, ಶ್ರೀನಿವಾಸ ರೈ ಹಾಗೂ ಅಜಿತ್ ಕೊಟ್ಟಕೇರಿಯನ ಭಾಗವಹಿಸಿದ್ದರು.