ಪೊನ್ನಂಪೇಟೆ, ಜು.೩೧: ಇತ್ತೀಚಿಗೆ ನಡೆದ ೨೦೨೧ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಸಿ.ಎಲ್.ಎ. ಟಿ.) ಇಡೀ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ವಿದ್ಯಾರ್ಥಿ ಗೋಣಿಕೊಪ್ಪಲಿನ ಇಟ್ಟಿರ ರಿಷಬ್ ದೇವಯ್ಯ

ಅಖಿಲ ಭಾರತ ಮಟ್ಟದಲ್ಲಿ ೧೪ನೇ ಸ್ಥಾನ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಇರುವ ರಾಷ್ಟಿçÃಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪಿಯುಸಿ ನಂತರದ ವ್ಯಾಸಂಗ ಮುಂದುವರಿಸಲು ನಡೆಸಲಾಗುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ರಿಷಬ್ ದೇವಯ್ಯ ಈ ಸಾಧನೆ ಮಾಡಿದ್ದಾರೆ.

ರಿಷಬ್ ದೇವಯ್ಯ, ಗೋಣಿಕೊಪ್ಪಲಿನ ನಿವಾಸಿ ಇಟ್ಟಿರ ಮಧು ನಂಜಪ್ಪ ಮತ್ತು ಪ್ರಣಿತ ನಂಜಪ್ಪ ದಂಪತಿಯ ಪುತ್ರ.