ಕೊಡ್ಲಿಪೇಟೆ, ಜು. ೩೧: ರೋಟರಿ ಸಂಸ್ಥೆ ಜನರಿಗೆ ಸಮೃದ್ಧತೆ ನೀಡುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ರೋಟರಿ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಅಭಿಪ್ರಾಯಪಟ್ಟರು.

ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರಸಂತೆಯ ದೇವ್ ವಿಲೇಜ್ ರೆಸಾರ್ಟ್ನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅನಿಲ್ ಎಚ್.ಟಿ., ರೋಟರಿ ಸದಾ ಸಮಾಜ ಸೇವೆಯನ್ನು ಮತ್ತು ಸರ್ವ ಜನರ ಏಳಿಗೆಯನ್ನು ಬಯಸುತ್ತದೆ ಎಂದರು.

ಹೊಸ ಸದಸ್ಯರ ಸೇರ್ಪಡೆ ಅದರಲ್ಲಿಯೂ ಮುಖ್ಯವಾಗಿ ಮಹಿಳಾ ಸದಸ್ಯೆಯರನ್ನು ರೋಟರಿಗೆ ಸೇರ್ಪಡೆಗೊಳಿಸುವತ್ತ ರೋಟರಿ ಮುಖಂಡರು ಗಮನ ನೀಡುವಂತೆ ಹೇಳಿದರು. ಜಿಲ್ಲೆಯಾಧ್ಯಂತ ರೋಟರಿ "ಸಂಸ್ಕಾರ" ಎಂಬ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ ಸಾವನ್ನಪ್ಪಿದವರಿಗೆ ಗೌರವಯುತ ಅಂತ್ಯ ಸಂಸ್ಕಾರ ನೀಡಲು ಸೂಕ್ತ ರುದ್ರಭೂಮಿಯನ್ನು ರೂಪಿಸುವ ನಿಟ್ಟಿನಲ್ಲಿ ರೋಟರಿ ಕಾರ್ಯ ಪ್ರವೃತ್ತವಾಗುತ್ತಿದೆ ಎಂದೂ ಅವರು ಹೇಳಿದರು.

ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ಮಾಜಿ ಉಪ ರಾಜ್ಯಪಾಲ ಪಿ.ಕೆ. ರವಿ ನೂತನ ಅಧ್ಯಕ್ಷ ದಿನೇಶ್ .ಡಿ.ವಿ. ಮತ್ತು ಕಾರ್ಯದರ್ಶಿ ಉಮೇಶ್ ಅವರಿಗೆ ಪ್ರಮಾಣ ವಚನ ಮತ್ತು ನೂತನ ಸದಸ್ಯರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ರೋಟರಿ ರಾಜಕೀಯ ರಹಿತ ಸಂಘಟನೆ ಯಾಗಿದ್ದು ಜಾತಿ ಧರ್ಮ ಪ್ರಾಂತ್ಯ ಇಲ್ಲದೆ ಕೆಲಸ ನಿರ್ವಹಿಸುತ್ತಿದೆ ಎಂದರು. ರೋಟರಿ ವಲಯ ೬ರ ಮಾಜಿ ಉಪರಾಜ್ಯಪಾಲ ಪಿ. ನಾಗೇಶ್ ಮಾತನಾಡಿ, ಕೋವಿಡ್ ನಿರ್ಮೂಲನೆಗೂ ರೋಟರಿ ಅಗತ್ಯ ಸಹಕಾರ ನೀಡಿದೆ ಎಂದರು.

ರೋಟರಿ ವಲಯ ೬ರ ಸಹಾಯಕ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪುರುಷೋತ್ತಮ ಎ.ಆರ್. ಹಾಗೂ ವಿಶೇಷ ಆಹ್ವಾನಿತರಾದ ಹಾಸನದ ರೋಟರಿ ಮುಖಂಡ ಜಲೇಂದ್ರ, ಹೇಮಾವತಿ ರೋಟರಿ ಸ್ಥಾಪಕ ಅಧÀ್ಯಕ್ಷ ಪ್ರವೀಣ್ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷ ಹೆಚ್.ಎಂ. ದಿವಾಕರ್ ಸ್ವಾಗತಿಸಿ, ಕಾರ್ಯದರ್ಶಿ ಉಮೇಶ್ ಯು.ಹೆಚ್. ವಂದಿಸಿ ದರು. ನಿರ್ಗಮಿತ ಕಾರ್ಯದರ್ಶಿ ಅಮೃತ್ ಕುಮಾರ್ ವೇದಿಕೆ ಯಲ್ಲಿದ್ದರು. ಪುನರ್ವ ನಿರೂಪಿಸಿ ದರು. ಕಾರ್ಯಕ್ರಮದಲ್ಲಿ ಮಂಜು ನಾಥ್ ಹಾಸನ, ಡಾ. ಉದಯ್ ಕುಮಾರ್, ಲಿಖಿತ್ ಸೋಮವಾರ ಪೇಟೆ ದಾನಿಗಳಾದ ಶಿವಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭ ರೋಟರಿ ಹೇಮಾವತಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.