ಶನಿವಾರಸಂತೆ, ಜು. ೩೧: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಳೆ - ಗಾಳಿಗೆ ಕುಸಿದು ಬಿದ್ದಿರುವ ಮನೆಗಳನ್ನು ತಹಶೀಲ್ದಾರ್ ಗೋವಿಂದರಾಜ್ ಹಾಗೂ ಕಂದಾಯ ಪರಿವೀಕ್ಷಕ ಮನುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಕ್ಯಾತೆ ಗ್ರಾಮದ ದೇವಮ್ಮ, ಕಸೂರು ಗ್ರಾಮದ ಕೆಂಚಮ್ಮ ಹಾಗೂ ಹಂಪಾಪುರ ಗ್ರಾಮದ ಜಯಮ್ಮ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪರಿಶೀಲಿಸಿದ ತಹಶೀಲ್ದಾರ್, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಜಿಲ್ಲಾಡಳಿತಕ್ಕೆ ಮಳೆಹಾನಿ ವರದಿ ಸಲ್ಲಿಸುವುದಾಗಿ ತಿಳಿಸಿದರು. ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.