ಟೋಕಿಯೊ, ಜು. ೩೧: ಭಾರತ ಮಹಿಳೆಯರ ಹಾಕಿ ತಂಡ ಜಪಾನ್ ರಾಷ್ಟçದ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ‘ಪೂಲ್ ಎ’ ಗುಂಪಿನ ೪ನೇ ಸ್ಥಾನಕ್ಕೆ ಐರ್ಲ್ಯಾಂಡ್ ಹಾಗೂ ಭಾರತದ ನಡುವಿನ ಆಟದಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಇಂದು ಬೆಳಿಗ್ಗೆ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಪಂದ್ಯದಲ್ಲಿ ೪-೩ ಗೋಲ್‌ಗಳಿಂದ ಗೆಲುವು ಸಾಧಿಸಿ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು.

ಭಾರತದ ‘ಗೋಲ್ ಡಿಫರೆನ್ಸ್’ ಕಡಿಮೆ ಇದ್ದ ಕಾರಣ ಸಂಜೆ ಬ್ರಿಟನ್ ಹಾಗೂ ಐರ್ಲ್ಯಾಂಡ್ ನಡುವಿನ ಪಂದ್ಯದಲ್ಲಿ ಐರ್ಲ್ಯಾಂಡ್ ಗೆದ್ದಿದ್ದರೆ, ಭಾರತ ಪಂದ್ಯಾವಳಿಯಿAದ ಹೊರಹೋಗುತ್ತಿತ್ತು. ಐರ್ಲ್ಯಾಂಡ್ ೨-೦ ಗೋಲುಗಳಿಂದ ಬ್ರಿಟನ್ ವಿರುದ್ಧ ಸೋತಿದ್ದು ಪಂದ್ಯಾವಳಿಯಿAದ ಹೊರಬಂದಿದೆ. ಭಾರತ ೪ನೇ ಸ್ಥಾನ ಪಡೆದಿದ್ದು ತಾ. ೨ ರಂದು ಆಸ್ಟೆçÃಲಿಯಾ ವಿರುದ್ಧ ಕ್ವಾರ್ಟರ್ ಫೈನಲ್ ಆಡಲಿದೆ.

ಇಂದು ಪುರುಷರ ಹಾಕಿ ಕ್ವಾರ್ಟರ್ ಫೈನಲ್

‘ಪೂಲ್ ಬಿ’ ಗುಂಪಿನಲ್ಲಿ ೨ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಹಾಕಿ ತಂಡ ತಾ. ೧ ರಂದು (ಇಂದು) ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲಿದೆ.