ಮಡಿಕೇರಿ, ಜು. ೨೯: ಮಾಹಿತಿ ಹಕ್ಕು ಕಾಯ್ದೆ ಎಂಬದು ಸಾರ್ವಜನಿಕರಿಗೆ ಒಂದು ಬ್ರಹ್ಮಾಸ್ತç... ಈ ಕಾಯ್ದೆಯ ಅವಕಾಶದಂತೆ ಸಾರ್ವಜನಿಕರು ಯಾವದೇ ಇಲಾಖೆಗಳಲ್ಲಿನ ವಿಚಾರಗಳ ಬಗ್ಗೆ ತಮ್ಮ ಸಂಶಯಗಳನ್ನು - ಅವ್ಯವಹಾರಗಳಾಗಿದ್ದಲ್ಲಿ ಅದರ ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಇದು ಕೆಲವೊಂದು ಇಲಾಖೆಗಳಲ್ಲಿ ಕೆಲವರಿಗೆ ಇರಿಸು - ಮುರಿಸು ಉಂಟು ಮಾಡುತ್ತದೆ. ತಮ್ಮಲ್ಲಿ ಲೋಪಗಳಿದ್ದಲ್ಲಿ ಇದು ಬಹಿರಂಗವಾಗುತ್ತದೆ ಎಂಬ ಅಂಜಿಕೆಯೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಕೆಲವರು ಸಕಾಲದಲ್ಲಿ ಮಾಹಿತಿ ನೀಡುವದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವದೂ ಉಂಟು..!
ಇಲ್ಲೊAದು ಪ್ರಕರಣ ಇದಕ್ಕೆ ಇಂಬು ನೀಡುವಂತಿದೆ. ಮಾಹಿತಿ ಹಕ್ಕು ಅಧಿನಿಯಮದಂತೆ ಮಡಿಕೇರಿಯ ಎ.ಎ. ತಮ್ಮು ಪೂವಯ್ಯ ಅವರು ಅರಣ್ಯ ಇಲಾಖೆಯಿಂದ ವಿವರವೊಂದನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಗೆ ಸಂಬAಧಿಸಿದAತೆ ಇಲಾಖೆಯ ‘ಚಾಣಾಕ್ಷ ನಡೆ’ ಅಚ್ಚರಿ ಮೂಡಿಸಿದೆ. ಜುಲೈ ೧೬ ರಂದು ಇವರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಉತ್ತರವೆಂಬAತೆ ತಾ. ೨೨ ರಂದು ಇಲಾಖೆಯ ಮೂಲಕ ನೋಟೀಸ್ ಟೈಪ್ ಆಗಿದೆ. ಇದರಲ್ಲಿ ಅರ್ಜಿಯ ಕುರಿತು ವಿಚಾರಣೆಯನ್ನು ೨೭.೭.೨೦೨೧ರಂದು ಪೂರ್ವಾಹ್ನ ೧೦.೩೦ಕ್ಕೆ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂಬ ಉಲ್ಲೇಖವಿದೆ. ಆದರೆ ನೋಂದಾಯಿತ ಅಂಚೆಯ ಮೂಲಕ ಇದನ್ನು ರವಾನಿಸಿರುವದು ೨೮.೭.೨೦೨೧ಕ್ಕೆ ಇದು ಅರ್ಜಿದಾರರಿಗೆ ತಲಪಿರುವದು ತಾ. ೨೯ ರಂದು ಇದಕ್ಕೆ ಏನೆನ್ನಬೇಕು...?