ಚೆಟ್ಟಳ್ಳಿ, ಜು. ೨೯: ಗೋವಾದಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ನೋಂದಣಿಯಾದ ಮೂರನೇ ಯೂತ್ ಗೇಮ್ಸ್ ಚಾಂಪಿಯನ್ ಶಿಪ್ ಫುಟ್ಬಾಲ್ನಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಕರ್ನಾಟಕದ ಸೀನಿಯರ್ ಹಾಗೂ ಅಂಡರ್ ೧೯ ತಂಡಗಳು ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.
ಕರ್ನಾಟಕದ ಸೀನಿಯರ್ ತಂಡವು ಸೆಮಿಫೈನಲ್ ಪಂದ್ಯದಲ್ಲಿ ೨-೧ ಗೋಲುಗಳಿಂದ ಬಲಿಷ್ಠ ಪಂಜಾಬ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಜಿದ್ದಾಜಿದ್ದಾಜಿನ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಕರ್ನಾಟಕ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿತು.
ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಕೊಡಗು ಜಿಲ್ಲೆಯ ಆಟಗಾರ ಶಾಹೇಬ್ ಅಮೋಘ ಪ್ರದರ್ಶನ ತೋರಿ ಎರಡು ಗೋಲು ಗಳಿಸಿದರು. ರೆತುರಾಜ್ ಹಾಗೂ ಉಮಾಚರಣ್ ತಲಾ ಒಂದು ಗೋಲು ಬಾರಿಸಿದರು.
ಕರ್ನಾಟಕ ಸೀನಿಯರ್ ತಂಡದ ಪರವಾಗಿ ಕೊಡಗಿನಿಂದ ಕುಶಾಲನಗರದ ಶಾಹೇಬ್ ಹಾಗೂ ಚೆಟ್ಟಳ್ಳಿಯ ಪ್ರೀತಮ್ ಆಡಿದರು.
೧೯ ವರ್ಷದ ವಯೋಮಿತಿ ಒಳಗಿನ ಕಾಲ್ಚೆಂಡು ಪಂದ್ಯದಲ್ಲಿ ಕರ್ನಾಟಕ ತಂಡವು ೧-೦ ಗೋಲುಗಳ ಅಂತರದಿAದ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಕರ್ನಾಟಕ ತಂಡ ೩-೧ ಗೋಲುಗಳ ಅಂತರದಿAದ ಭರ್ಜರಿ ಗೆಲುವು ಸಾಧಿಸಿತು.
ಕರ್ನಾಟಕ ತಂಡದ ಜೂನಿಯರ್ ತಂಡದ ಪರವಾಗಿ ರವಿಕುಮಾರ್, ಕೃಷ್ಣ ಹಾಗೂ ಲುಕ್ಮಾನ್ ತಲಾ ಒಂದು ಗೋಲುಗಳನ್ನು ಬಾರಿಸಿದರು.
ಕರ್ನಾಟಕದ ತಂಡದ ಪರವಾಗಿ ಕೊಡಗು ಜಿಲ್ಲೆಯಿಂದ ರವಿ, ದರ್ಶನ್, ಲತನ್, ಸೃಜನ್, ನಿಕ್ಷಿತ್ ಹಾಗೂ ಸ್ಟೀಟವನ್ ಆಡಿದರು.