ಮಡಿಕೇರಿ, ಜು. ೨೯: ಅಯ್ಯಂಗೇರಿ ಗ್ರಾಮಪಂಚಾಯಿತಿ ಪಿಡಿಓ ಅವರನ್ನು ಒಂದು ವಾರದ ಒಳಗಾಗಿ ವರ್ಗಾವಣೆ ಮಾಡಿ ಉದ್ಯೋಗ ಖಾತ್ರಿಯ ಕ್ರಿಯಾ ಯೋಜನೆಯನ್ನು ರದ್ದು ಮಾಡಿ ಕಾನೂನು ಬದ್ದವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಪಂಚಾಯಿತಿ ಸದಸ್ಯ ಅಬ್ದುಲ್ ರಾಶಿದ್ ಹೇಳಿದ್ದಾರೆ. ಅಯ್ಯಂಗೇರಿ ಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಯ್ಯಂಗೇರಿ ಗ್ರಾಮಪಂಚಾಯಿತಿಗೆ ಅಯ್ಯಂಗೇರಿ ಮತ್ತು ಸಣ್ಣಪುಲಿಕೋಟು ಗ್ರಾಮಗಳು ಸೇರಿದ್ದು ೨೦೨೧-೨೨ ರ ಸಾಲಿಗೆ ಪ್ರಸ್ತಾಪಿಸಲಾದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿ ಗಳ ಕ್ರಿಯಾ ಯೋಜನೆ ತಯಾರಿಸಿದ್ದು ಅದರಲ್ಲಿ ಶೇ. ೩೦ರಷ್ಟನ್ನು ಮಾತ್ರ ಅಯ್ಯಂಗೇರಿ ಗ್ರಾಮಕ್ಕೆ ಮೀಸಲಿಟ್ಟು ತಾರತಮ್ಯ ಎಸಗಿದ್ದಾರೆ. ಈ ಪ್ರಸ್ತಾವವನ್ನು ತಿರಸ್ಕರಿಸಿ ನ್ಯಾಯವಾದ ಪ್ರಸ್ತಾವ ತಯಾರಿಸಲು ಆದೇಶಿಸಲು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತ್ತೋರ್ವ ಗ್ರಾಮ ಪಂಚಾ ಯಿತಿ ಸದಸ್ಯ ನಾಳಿಯಂಡ ಚಂಗಪ್ಪ ಮಾತನಾಡಿ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಪಿಡಿಓ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ.ಅಲ್ಲದೆ ಅಧ್ಯಕ್ಷರೊಂದಿಗೆ ಶಾಮೀಲಾಗಿ ಒಂದೇ ಗ್ರಾಮಕ್ಕೆ ಕ್ರಿಯಾಯೋಜನೆ ತಯಾರಿಸಲು ಬೆಂಬಲಿಸಿದ್ದಾರೆ.ಈ ಕುರಿತು ಜಿಲ್ಲಾ ಪಂಚಾಯತಿ ಕಾರ್ಯನಿರ್ವ ಹಣಾಧಿಕಾರಿಯವರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮಪಂಚಾಯಿತಿ ಸದಸ್ಯರಾದ ಆಚೀರ ಕಾವೇರಮ್ಮ, ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ಆಚೀರ ಚೆಂಗಪ್ಪ, ಕೆ.ಬಿ ಸಂತೋಷ್, ಅಯ್ಯಂಗೇರಿ ವಲಯ ಬಿಜೆಪಿ ಅಧ್ಯಕ್ಷ ಜೀವನ್ ಕುಮಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಎಂ.ಎA. ಅಯ್ಯಂಗೇರಿ ಎಸ್ಡಿಪಿಐ ಅಧ್ಯಕ್ಷ ಉಸ್ಮಾನ್, ಅಯ್ಯಂಗೇರಿ ಯುವಮೋರ್ಚಾ ಪ್ರಮುಖರಾದ ದೀಪಕ್, ಪ್ರತೀಷ್ಕುಮಾರ್, ರಿತನ್, ಯುವ ಕಾಂಗ್ರೆಸ್ ಮುಖಂಡರಾದ ಇಷಾಕ್, ರವೂಫ್, ಮನ್ಸೂರ್, ಬಿದ್ದಿಯಂಡ ಸುಭಾಷ್, ರಾಕೇಶ್ ಇದ್ದರು.