ಕೂಡಿಗೆ, ಜು. ೩೦: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ವಿವಿಧೆಡೆ ವಿಜಯೋತ್ಸವವನ್ನು ಆಚರಿಸಲಾಯಿತು.

೧೯೯೯ರ ಕಾರ್ಗಿಲ್ ಆಪರೇಷನ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ಆದ ಕುಶಾಲ ನಗರದ ಕಾರ್ಪೊರೇಷನ್ ಬ್ಯಾಂಕ್‌ನ ಸಿಬ್ಬಂದಿ ಪಿ.ಎ. ನಬಿ ಅವರನ್ನು ಮುಳ್ಳುಸೋಗೆ ಗ್ರಾಮದಲ್ಲಿ ಸನ್ಮಾನಿಸಲಾಯಿತು.

ಮುಳ್ಳುಸೋಗೆ ಗ್ರಾಮದ ಬಸಪ್ಪ ಬಡಾವಣೆಯ ಪೊಲೀಸ್ ದಫೇದಾರ ಕೃಷ್ಣಶೆಟ್ಟಿ ಅವರ ಮನೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಬಿ, ದೇಶದ ಐಕ್ಯತೆಯನ್ನು ಎತ್ತಿಹಿಡಿಯಲು ಎಲ್ಲರೂ ಪಣ ತೊಡಬೇಕು ಎಂದರು. ಈ ಸಂದರ್ಭ ಕೂಡಿಗೆ ಚೇತನ್ ಹಾಗೂ ಬಡಾವಣೆಯ ನಿವಾಸಿಗಳು, ವಿದ್ಯಾರ್ಥಿಗಳು ಇದ್ದರು.