ಮಡಿಕೇರಿ, ಜು. ೩೦: ಸಿಬಿಎಸ್ಸಿ ಪಠ್ಯಕ್ರಮದಂತೆ ೧೦ನೇ ತರಗತಿಗೆ ಸಂಬAಧಿಸಿದ ಪರೀಕ್ಷೆಯ ಫಲಿತಾಂಶದ ಬಗ್ಗೆ ಇನ್ನೂ ಸೂಕ್ತ ಮಾಹಿತಿ ಹೊರಬಿದ್ದಿಲ್ಲ. ಇದರಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗದ ಕುರಿತಾಗಿ ಗೊಂದಲದಲ್ಲಿದ್ದು, ಫಲಿತಾಂಶದ ಕಾತರದಲ್ಲಿದ್ದಾರೆ. ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಈ ಬಗ್ಗೆ ಗೊಂದಲವಿದ್ದು, ಸಿಬಿಎಸ್ಸಿ ಮಂಡಳಿಯ ತೀರ್ಮಾನಕ್ಕಾಗಿ ಕಾಯುವಂತಾಗಿದೆ.
೧೦ನೇ ತರಗತಿಗೆ ಸಂಬAಧಿಸಿದAತೆ ಕೊಡಗಿನಲ್ಲಿ ಒಂಬತ್ತು ಶಾಲೆಗಳಿವೆ. ಈ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು- ಪೋಷಕರು ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಮಕ್ಕಳ ಮುಂದಿನ ಹೆಜ್ಜೆಯನ್ನು ನಿರ್ಧರಿಸುವ ತವಕದಲ್ಲಿ ಗೊಂದಲದಲ್ಲಿದ್ದಾರೆ. ಮಡಿಕೇರಿಯ ಕೊಡಗು ವಿದ್ಯಾಲಯ, ಸೈನಿಕ್ ಶಾಲೆ, ನವೋದಯ, ಕೇಂದ್ರೀಯ ವಿದ್ಯಾಲಯ, ಕ್ರೆಸೆಂಟ್, ನ್ಯಾಷನಲ್ ಅಕಾಡೆಮಿ, ಅಂಕುರ್ ಶಾಲೆ, ಎಸ್.ಎಂ.ಎಸ್. ವಿದ್ಯಾಪೀಠ, ಜ್ಞಾನಗಂಗಾ ಶಾಲೆ ಹಾಗೂ ಸುಳ್ಯ ವಿಭಾಗದಲ್ಲಿನ ಶಾಲೆಯೊಂದು ಕೊಡಗಿನ ವ್ಯಾಪ್ತಿಗೆ ಬರುವ ಪ್ರೌಢಶಾಲೆಗಳಾಗಿವೆ. ಈ ವಿದ್ಯಾ ಸಂಸ್ಥೆಗಳವರೂ ಇದಕ್ಕಾಗಿ ಕಾಯುತ್ತಿದ್ದಾರೆ.
ಈ ಬಗ್ಗೆ ದೆಹಲಿಯ ಸಿಬಿಎಸ್ಸಿ ಬೋರ್ಡ್ನ ಮೂಲಕ ನಿರ್ಧಾರ ಪ್ರಕಟವಾಗಬೇಕಿದೆ ಎಂದು ತಿಳಿದುಬಂದಿದೆ. ೧೨ನೇ ತರಗತಿಯ ಫಲಿತಾಂಶ ತಾ. ೩೦ರಂದು ಘೋಷಣೆಯಾಗಿದೆ. ೧೦ನೇ ತರಗತಿಗೆ ಸಂಬAಧಿಸಿದAತೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದ ಸಿಬಿಎಸ್ಸಿ ಬೋರ್ಡ್ಗೂ ಈ ಕುರಿತು ದೆಹಲಿ ಮಟ್ಟದಿಂದ ವಿವರ ಲಭ್ಯವಾಗಬೇಕಿದೆ.