? ವಿಶೇಷ ವರದಿ: ಕುಡೆಕಲ್ ಸಂತೋಷ್

ಮಡಿಕೇರಿ, ಜು. ೨೯ : ಜಿಲ್ಲೆಯ ಪ್ರಮುಖ ಹಾಗೂ ಏಕೈಕ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾಗಿರುವ ಅರಣ್ಯ ಜಾಗಕ್ಕೆ ಪರ್ಯಾಯ ಜಾಗವಾಗಿ ಇದೀಗ ಕಂದಾಯ ಇಲಾಖಾ ಜಾಗವನ್ನು ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶಿಸಿದೆ. ಮುಳುಗಡೆಗೊಂಡ ೩೯೦೦ ಎಕರೆಗೆ ಬದಲಾಗಿ ಇದೀಗ ೧೧೭೨೨.೨೯ ಹೆಕ್ಟೇರ್ ಜಾಗ ನೀಡುವಂತೆ ಆದೇಶದಲ್ಲಿ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖಾಲಿ ಇರುವ ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗವನ್ನು ಗುರುತಿಸಿ, ಸರ್ವೇ ಕಾರ್ಯಕ್ಕೆ ಮುಂದಾಗಿರುವದಾಗಿ ತಿಳಿದುಬಂದಿದೆ.

ಸೋಮವಾರಪೇಟೆ ತಾಲೂಕಿನ ಹುದುಗೂರು ಗ್ರಾಮದಲ್ಲಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ಹಾರಂಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ೧೯೭೦ರಲ್ಲಿ ನಿರ್ಮಾಣ ಕಾರ್ಯ ಆರಂಭಗೊAಡ ಸಂದರ್ಭದಲ್ಲಿ ಸುತ್ತಮುತ್ತಲಿನಲ್ಲಿ ನೆಲೆಸಿದ್ದ ನಿವಾಸಿಗಳ ಜಾಗ ಹಾಗೂ ಮನೆಗಳು ಮುಳುಗಡೆಗೊಂಡವು. ಮನೆ ಹಾಗೂ ಜಾಗ ಕಳೆದುಕೊಂಡವರಿಗೆ ಅತ್ತೂರು ಹಾಗೂ ಹೇರೂರುವಿನಲ್ಲಿ ಪರ್ಯಾಯ ಜಾಗ ಸರಕಾರದ ವತಿಯಿಂದ ನೀಡಲಾಗಿತ್ತು. ಆದರೆ, ಮುಳುಗಡೆಗೊಂಡ ಅರಣ್ಯ ಪ್ರದೇಶಕ್ಕೆ ಬದಲಾಗಿ ಜಾಗ ನೀಡಬೇಕೆಂದು ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರದಲ್ಲಿ ನ್ಯಾಯಾಲಯ ಜಾಗ ನೀಡುವಂತೆ ಸರಕಾರಕ್ಕೆ ಆದೇಶ ನೀಡಿದೆ.

೧೯೭೨ರ ಕರಾರು

ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮ ವ್ಯಾಪ್ತಿಯ ೯೦೦ ಎಕರೆ ಹಾಗೂ ಅತ್ತೂರುವಿನ ೩೦೦೦ ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿರುವ ಹಿನ್ನೆಲೆಯಲ್ಲಿ ಈ ಜಾಗಕ್ಕೆ ಬದಲಾಗಿ ಪರ್ಯಾಯ ಜಾಗ ನೀಡುವದಾಗಿ ಒಪ್ಪಂದವಾಗಿತ್ತು. ೧೯೭೨ರಲ್ಲಿ ಈ ಕರಾರು ಒಪ್ಪಂದವಾಗಿದ್ದು, ಜಾಗ ಅಲಭ್ಯತೆಯಿಂದಾಗಿ ಅಷ್ಟೊಂದು ಜಾಗ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ವರೆಗೆ ಜಾಗ ನೀಡಿರಲಿಲ್ಲ.

ನ್ಯಾಯಾಲಯದಲ್ಲಿ ಅರ್ಜಿ

ಕರಾರು ಒಪ್ಪಂದದAತೆ ಸರಕಾರ ಅರಣ್ಯ ಇಲಾಖೆಗೆ ಜಾಗ ಹಸ್ತಾಂತರಿಸಿಲ್ಲ. ಒಪ್ಪಂದದ ಪ್ರಕಾರ ಸರಕಾರ ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಹಾಗೂ ಸಿ ಅಂಡ್ ಡಿ ಜಾಗ ಹಸ್ತಾಂತರಿಸಬೇಕೆAದು ಕೋರಿ ಕೆಲವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ. ನಾಗರತ್ನ ಹಾಗೂ ಕೆ.ಎಂ.ಖಾಝಿ ಅವರುಗಳಿದ್ದ ಪೀಠ ಕಂದಾಯ ಇಲಾಖೆ ಮೂಲಕ ಒಟ್ಟು ೧೧,೭೨೨,೨೯ ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವAತೆ ಆದೇಶ ನೀಡಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಆದೇಶ ಹೊರಡಿಸಿದ್ದು, ಮೇ ತಿಂಗಳ ಮೊದಲ ವಾರದ ಒಳಗಡೆ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿತ್ತು.

ಜಂಟಿ ಸರ್ವೇ ಕಾರ್ಯ

ನ್ಯಾಯಾಲಯದ ಆದೇಶದ ಮೇರೆಗೆ ಸರಕಾರದ ಸೂಚನೆಯಂತೆ ಜಿಲ್ಲಾಡಳಿತ ಕಂದಾಯ ಭೂಮಿಯ ಗುರುತಿಸುವ ಕಾರ್ಯಕ್ಕೆ ಮುಂದಾಗಿರುವದಾಗಿ ತಿಳಿದು ಬಂದಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಪೈಸಾರಿ ಜಾಗ ಹಾಗೂ ಸಿ ಅಂಡ್ ಡಿ

(ಮೊದಲ ಪುಟದಿಂದ) ಜಾಗವನ್ನು ಗುರುತಿಸಲು ಮುಂದಾಗಿದ್ದು, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಡಿಡಿಎಲ್‌ಆರ್ ಮೂಲಕ ಈ ಸರ್ವೇ ಕಾರ್ಯ ನಡೆಯಲಿರುವದಾಗಿ ತಿಳಿದುಬಂದಿದೆ.

ಇಲಾಖೆ ಜಾಗ ಕೇಳಿಲ್ಲ..!

ವಿಶೇಷವೆಂದರೆ ಸಾರ್ವಜನಿಕರ, ಜಿಲ್ಲೆಯ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಅಣೆಕಟ್ಟೆ ಸಂದರ್ಭ ಜಾಗ ಮುಳುಗಡೆಯಾಗಿದೆ. ಆದರೆ ಇದುವರೆಗೂ ಅರಣ್ಯ ಇಲಾಖೆ ಜಾಗ ನೀಡುವಂತೆ ಕೇಳಿಲ್ಲ. ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವದರಿಂದ ಇದೀಗ ೩೯೦೦ ಎಕರೆ ಬದಲಿಗೆ ೧೧,೭೨೨ ಹೆಕ್ಟೇರ್ ಜಾಗ ನೀಡುವಂತಾಗಿದೆ. ವಾಸ್ತವತೆಯನ್ನು ಗಮನಿಸಿದರೆ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದ ಕಂದಾಯ ಜಾಗ ಲಭ್ಯವಿದೆಯೇ..? ಎಂದು ನೋಡಬೇಕಿದೆ. ಒಂದು ವೇಳೆ ಬಡವರು, ಸಣ್ಣ ಬೆಳೆಗಾರರು ಒತ್ತುವರಿ ಮಾಡಿಕೊಂಡು ಮನೆ, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರ ಜಾಗ ತೆರವುಗೊಳಿಸಿ ನೀಡಿದರೆ ಲಕ್ಷಾಂತರ ಮಂದಿಯ ಬದುಕು ಮೂರಾಬಟ್ಟೆಯಾಗುವದರಲ್ಲಿ ಸಂಶಯವಿಲ್ಲ. ಆದರೂ ಇದಾವದನ್ನು ಗಮನಿಸದೆ ಜಿಲ್ಲಾಧಿಕಾರಿಗಳು ಸರ್ವೇಗೆ ಮುಂದಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ (ಮೊದಲ ಪುಟದಿಂದ) ಜಾಗವನ್ನು ಗುರುತಿಸಲು ಮುಂದಾಗಿದ್ದು, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಡಿಡಿಎಲ್‌ಆರ್ ಮೂಲಕ ಈ ಸರ್ವೇ ಕಾರ್ಯ ನಡೆಯಲಿರುವದಾಗಿ ತಿಳಿದುಬಂದಿದೆ.

ಇಲಾಖೆ ಜಾಗ ಕೇಳಿಲ್ಲ..!

ವಿಶೇಷವೆಂದರೆ ಸಾರ್ವಜನಿಕರ, ಜಿಲ್ಲೆಯ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಅಣೆಕಟ್ಟೆ ಸಂದರ್ಭ ಜಾಗ ಮುಳುಗಡೆಯಾಗಿದೆ. ಆದರೆ ಇದುವರೆಗೂ ಅರಣ್ಯ ಇಲಾಖೆ ಜಾಗ ನೀಡುವಂತೆ ಕೇಳಿಲ್ಲ. ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವದರಿಂದ ಇದೀಗ ೩೯೦೦ ಎಕರೆ ಬದಲಿಗೆ ೧೧,೭೨೨ ಹೆಕ್ಟೇರ್ ಜಾಗ ನೀಡುವಂತಾಗಿದೆ. ವಾಸ್ತವತೆಯನ್ನು ಗಮನಿಸಿದರೆ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದ ಕಂದಾಯ ಜಾಗ ಲಭ್ಯವಿದೆಯೇ..? ಎಂದು ನೋಡಬೇಕಿದೆ. ಒಂದು ವೇಳೆ ಬಡವರು, ಸಣ್ಣ ಬೆಳೆಗಾರರು ಒತ್ತುವರಿ ಮಾಡಿಕೊಂಡು ಮನೆ, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರ ಜಾಗ ತೆರವುಗೊಳಿಸಿ ನೀಡಿದರೆ ಲಕ್ಷಾಂತರ ಮಂದಿಯ ಬದುಕು ಮೂರಾಬಟ್ಟೆಯಾಗುವದರಲ್ಲಿ ಸಂಶಯವಿಲ್ಲ. ಆದರೂ ಇದಾವದನ್ನು ಗಮನಿಸದೆ ಜಿಲ್ಲಾಧಿಕಾರಿಗಳು ಸರ್ವೇಗೆ ಮುಂದಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ