ಮಡಿಕೇರಿ, ಜು. ೨೯: ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯದಲ್ಲಿ ಒಮ್ಮೆಲೆ ಹೆಚ್ಚಾಗುತ್ತಿದ್ದು, ಕೊಡಗು-ಕೇರಳ ಗಡಿಯಲ್ಲಿ ಆತಂಕ ಮನೆ ಮಾಡಿದೆ.
ಕೊಡಗಿನಲ್ಲಿಯೂ ಕೂಡ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖ ಗೊಂಡಿದ್ದು, ಕೇರಳದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿರುವುದು ಕೊಡಗು ಜಿಲ್ಲೆಯ ಜನರನ್ನು ಆತಂಕಕ್ಕೆ ನೂಕಲ್ಪಟ್ಟಿದೆ. ಕೇರಳ-ಕೊಡಗು ಗಡಿಯಲ್ಲಿ ಸಂಚಾರಕ್ಕೆ ವಿನಾಯಿತಿ ಇದ್ದು, ದಿನನಿತ್ಯ ಸರಕು ಸಾಗಾಣೆ ಸೇರಿದಂತೆ ಜನರ ಸಂಚಾರ ಕೂಡ ಇರುವುದು ಕಳವಳಕ್ಕೆ ಕಾರಣವಾಗಿವೆ.
ಈ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜಿಲ್ಲೆಯ ಗಡಿಭಾಗ ಕರಿಕೆ ಚೆಕ್ಪೋಸ್ಟ್ಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರಕಾರದ ನಿಯಮ ಪಾಲಿಸಿ
ಕೇರಳ ರಾಜ್ಯದಲ್ಲಿ ಕೋವಿಡ್ ೧೯ ಮೂರನೇ ಅಲೆ ಆರಂಭವಾಗುತ್ತಿರುವ ಮಡಿಕೇರಿ, ಜು. ೨೯: ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯದಲ್ಲಿ ಒಮ್ಮೆಲೆ ಹೆಚ್ಚಾಗುತ್ತಿದ್ದು, ಕೊಡಗು-ಕೇರಳ ಗಡಿಯಲ್ಲಿ ಆತಂಕ ಮನೆ ಮಾಡಿದೆ.

ಕೇರಳ ರಾಜ್ಯದಲ್ಲಿ ಕೋವಿಡ್ ೧೯ ಮೂರನೇ ಅಲೆ ಆರಂಭವಾಗುತ್ತಿರುವ ಪಡೆದುಕೊಂಡಿದ್ದ ಕೇರಳದಲ್ಲಿ ಇದೀಗ ಪರಿಸ್ಥಿತಿ ಕೈಮೀರಿರುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸತತ ೨ ದಿನದಿಂದ ೨೨ ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಪುಟ್ಟರಾಜ್ಯವು ಇಡೀ ದೇಶದ ಒಟ್ಟು ಕೇಸಿನಲ್ಲಿ
(ಮೊದಲ ಪುಟದಿಂದ) ಶೇ.೫೦ರಷ್ಟು ಪಾಲು ಹೊಂದಿರುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
೨ನೇ ಅಲೆಯಿಂದ ಮುಕ್ತಿ ಕಾಣುತ್ತಿದೆ ಎನ್ನುವಾಗಲೇ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ, ಕೋವಿಡ್ ವಿಷಯದಲ್ಲಿ ತೋರಿದೆ ಎನ್ನಲಾದ ಅಜಾಗರೂಕತೆ ಸಹಜವಾಗಿಯೇ ಕೇಂದ್ರ ಸರ್ಕಾರವನ್ನು ಆತಂಕದ ಮಡುವಿಗೆ ತಳ್ಳಿದೆ. ಹೀಗಾಗಿಯೇ ಪಾಸಿಟಿವಿಟಿ ದರ ಶೇ.೧೦ ದಾಟಿರುವ ಕೇರಳದ ೧೦ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಶೀಘ್ರವೇ ತಜ್ಞರ ತಂಡವೊAದನ್ನು ರಾಜ್ಯಕ್ಕೆ ರವಾನಿಸಲೂ ನಿರ್ಧರಿಸಿದೆ.
ಕೇರಳದಲ್ಲಿ ಮಂಗಳವಾರ ೨೨೦೦೦ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.೧೨ ಮೀರಿದೆ. ೧೫೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಮಂಗಳವಾರ ಇಡೀ ದೇಶದಲ್ಲಿ ದಾಖಲಾದ ಒಟ್ಟು ಕೇಸಿನಲ್ಲಿ ಶೇ.೪೫ರಷ್ಟು ಪಾಲಾಗಿದೆ. ಬುಧವಾರವೂ ೨೨,೦೩೬ ಕೇಸು ದಾಖಲಾಗಿದ್ದು, ೧೩೧ ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಶೇ.೧೧.೨ರಷ್ಟು ದಾಖಲಾಗಿದೆ.
ರಾಜ್ಯ ಸರ್ಕಾರ ಮಾತ್ರ, ಕೇರಳದಲ್ಲಿ ಜನಸಾಂದ್ರತೆ ಪ್ರಮಾಣ ದೇಶದ ಸರಾಸರಿಗಿಂತ ಹೆಚ್ಚಿದೆ. ಜೊತೆಗೆ ಮಧುಮೇಹಿಗಳು ಮತ್ತು ಹಿರಿಯ ವಯಸ್ಕರ ಸಂಖ್ಯೆ ಹೆಚ್ಚಿರುವುದು ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಜೊತೆಗೆ ಪರೀಕ್ಷೆ ಪ್ರಮಾಣ ಹೆಚ್ಚಿಸಿರುವ ಕಾರಣ ಸಹಜವಾಗಿಯೇ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದಾರೆ. ಮೊದಲು ಮತ್ತು ಎರಡನೇ ಅಲೆಯ ವೇಳೆಗಿಂತ ಹೆಚ್ಚಿನ ಸೋಂಕಿತರು ಕಂಡುಬAದರೂ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ, ಸಾವಿನ ಪ್ರಮಾಣ, ಆಕ್ಸಿಜನ್ ಬೆಡ್, ವೆಂಟಿಲೇಟರ್ ಬೆಡ್ ಬಳಕೆ ಪ್ರಮಾಣ ಕಡಿಮೆಯೇ ಇದೆ ಎಂದು ಹೇಳಿಕೊಳ್ಳುತ್ತಿದೆ.
ಕೇರಳ ರಾಜ್ಯದಲ್ಲಿನ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಶೀಘ್ರವೇ ಕೇರಳದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆಗೆ ನಿರ್ಧರಿಸಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳ ತಜ್ಞರ ತಂಡವೊAದನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಅಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ಶೇ.೧೦ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ೧೦ ಜಿಲ್ಲೆಗಳಲ್ಲಿ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಕೇರಳಕ್ಕೆ ಸೂಚಿಸಿದೆ.
ಆತಂಕಕಾರಿ ಪ್ರಮಾಣದಲ್ಲಿ ಏರಿಕೆ
ಮೊದಲನೆ ಅಲೆ ಮುಕ್ತಾಯ ಎಂದು ಹೇಳಬಹುದಾದ ೨೦೨೧ ಮಾ.೧೫ರಂದು ಕೇರಳದಲ್ಲಿ ಕೇವಲ ೧೦೫೪ ಕೇಸು ದಾಖಲಾಗಿತ್ತು. ನಂತರ ೨ನೇ ಅಲೆ ಆರಂಭವಾಗಿ ಏ.೧೬ರಂದು ಮೊದಲ ಬಾರಿಗೆ ಕೇಸುಗಳ ಪ್ರಮಾಣ ೧೦ ಸಾವಿರದ ಗಡಿ ದಾಟಿತ್ತು. ಅಲ್ಲಿಂದ ಬಳಿಕ ಈವರೆಗೆ ಕೇವಲ ೭ ದಿನ ಮಾತ್ರವೇ ೧೦ ಸಾವಿರಕ್ಕಿಂತ ಕಡಿಮೆ ಕೇಸು ರಾಜ್ಯದಲ್ಲಿ ದಾಖಲಾಗಿದೆ.
ಮೇ ೧೨ರಂದು ಗರಿಷ್ಠ ೪೨೦೦೦ಕ್ಕೂ ಹೆಚ್ಚು ಕೇಸು ದಾಖಲಾಗಿ ನಂತರ ಜೂನ್ನಲ್ಲಿ ಹಂತಹAತವಾಗಿ ಇಳಿಕೆಯಾಗುತ್ತಾ ಬಂದಿತ್ತು. ಆದರೆ ಜೂನ್ ೧೫ರ ಬಳಿಕ ಮತ್ತೆ ಕೇಸುಗಳ ಪ್ರಮಾಣ ಏರಿಕೆಯ ಹಾದಿಯಲ್ಲೆ ಸಾಗಿದ್ದು, ಬುಧವಾರ ೨೨ ಸಾವಿರದ ಗಡಿ ದಾಟಿದೆ. ಇದು ದೇಶದಲ್ಲಿ ದಾಖಲಾದ ಒಟ್ಟು ಕೇಸಿನಲ್ಲಿ ಶೇ.೫೦ರಷ್ಟು ಪಾಲು ಎಂಬುದೇ ಆತಂಕಕಾರಿ ವಿಷಯ.
ಬುಧವಾರದ ಅಂಕಿ ಸಂಖ್ಯೆಗಳ ಅನ್ವಯ ರಾಜ್ಯದಲ್ಲಿ ೧.೪೯ ಲಕ್ಷ ಸಕ್ರಿಯ ಸೋಂಕಿತರಿದ್ದಾರೆ. ಇದು ದೇಶದ ಒಟ್ಟು ಸಕ್ರಿಯ ಸೋಂಕಿತರ ಪ್ರಮಾಣವಾದ ೪ ಲಕ್ಷಕ್ಕೆ ಹೋಲಿಸಿದರೆ ಶೇ.೩೦ರಷ್ಟು ಎಂಬ ವಿಷಯ ಕೂಡಾ ಕಳವಳಕಾರಿಯಾಗಿದೆ.