ಚೆಯ್ಯಂಡಾಣೆ, ಜು. ೨೯: ಕೊಡಗು ಸಿಂರ್ಸ್ ಗ್ರೂಪ್ ವತಿಯಿಂದ ನಾಪೋಕ್ಲುವಿನ ಅಲ್ ಜೂಕ್ ಹೊಟೇಲ್ ಸಭಾಂಗಣದಲ್ಲಿ ರಾಷ್ಟಿçÃಯ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮ (ಪೆರುನಾಲ್ ಪಟ್ಟುರುಮಾಲ್) ನಡೆಯಿತು.
ಉಪಾಧ್ಯಕ್ಷ ಕಾಳೇರ ಆಲಿರವರು ಅಧ್ಯಕ್ಷತೆ ವಹಿಸಿದ್ದರು. ವಿಭಿನ್ನ ಹಂತಗಳಲ್ಲಿ ಆನ್ಲೈನ್ನಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಫೈನಲ್ ಹಂತದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಫಯಾಜ್ ಇರಿಟ್ಟಿ ಪ್ರಥಮ, ಅಬ್ದುಲ್ ಹಕೀಮ್ ವೀರಾಜಪೇಟೆ ದ್ವಿತೀಯ, ಸುಹೈಲ್ ಬೇತ್ರಿ ತೃತೀಯ ಹಾಗೂ ನೌಫಲ್ ಕಡಂಗ ನಾಲ್ಕನೇ ಸ್ಥಾನ ಗಳಿಸಿದರು. ಅಬಿದ್ ಉಸ್ತಾದರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಅಬು ಇಶಾಮ್ ಝುಹ್ರಿ ಉಸ್ತಾದ್ ಉದ್ಘಾಟಿಸಿ ಸಿಂರ್ಸ್ ಗ್ರೂಪ್ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾಪೋಕ್ಲು ಮುಸ್ಲಿಂ ಜಮಾಅತ್ ಅಧ್ಯಕ್ಷ ಸಲೀಮ್ ಹ್ಯಾರಿಸ್, ನಾಪೋಕ್ಲು ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಹ್ಮದ್ ಸಿ.ಹೆಚ್., ಉದ್ಯಮಿಗಳಾದ ನಜೀರ್ ಚಾಮಿಯಾಲ್, ಅಶ್ರಫ್ ಕಡಂ, ಸಿದ್ದಿಕ್, ಶಿಹಾಬ್ ಅಲ್ ವಫಾ, ಇರ್ಷಾದ್ ಉಸ್ತಾದ್ ಇದ್ದರು.
ತೀರ್ಪುಗಾರರಾಗಿ ಜಮಾಲ್ ಮಟ್ಟನೂರ್, ಹಮೀದ್, ಶಿಯಾಬ್ ತಳಿಪರಂಬ ಕಾರ್ಯನಿರ್ವಹಿಸಿದರು. ಕಾರ್ಯದರ್ಶಿ ಸಿರಾಜುದ್ದಿನ್ ಸ್ವಾಗತಿಸಿ, ಹ್ಯಾರಿಸ್ ವೀರಾಜಪೇಟೆ ಕಾರ್ಯಕ್ರಮ ನಿರೂಪಿಸಿದರು.