ವೀರಾಜಪೇಟೆ, ಜು. ೨೯: ವೀರಾಜಪೇಟೆಯ ಮೂರ್ನಾಡು ರಸ್ತೆಯ ಸಮೀಪ ಹಳೆ ಕೊಲಂಬೋ ಸ್ಟೋರ್ ಜಗುಲಿ ಮೇಲೆ ಮಳೆಗಾಲದಲ್ಲಿ ತಮ್ಮ ಸುತ್ತ ಬಣ್ಣ-ಬಣ್ಣದ ಬಟ್ಟೆ ಹರಿದ, ಕಡ್ಡಿ ಮುರಿದ ಕೊಡೆ ರಾಶಿ ಹರಡಿಕೊಂಡು ಕೊಡೆ ರಿಪೇರಿ ಮಾಡಿಕೊಡುವ ಬಶೀರ್ ಎಂದರೆ ಸ್ಥಳೀಯರೆಲ್ಲರಿಗೂ ಚಿರಪರಿಚಿತ.

ಕೊಡಗಿನಲ್ಲಿ ಮಳೆಗಾಲ ಬಂತೆAದರೆ ಸಾಕು, ಯುದ್ಧಕ್ಕೆ ತಯಾರಾಗುವ ಮಾದರಿ ಸಿದ್ಧತೆ ಮಾಡಿಕೊಳ್ಳಬೇಕು. ಮನೆಯಲ್ಲಿ ನಾಲ್ಕುಮಂದಿ ಇದ್ದರೆ ನಾಲ್ಕು ಮಂದಿಗೂ ಒಂದೊAದು ಕೊಡೆ, ಮಳೆಗೆ ಬೇಕಾಗುವ ಚಪ್ಪಲಿ, ರೈನ್ ಕೋಟ್, ಕೆಲಸಕ್ಕೆ ಹೋಗುವವರಾದರೆ ಪ್ಲಾಸ್ಟಿಕ್, ವಾರ-ವಾರ ಸಂತೆಗೆ ಬರಲಾಗದಿದ್ದರೆ ದಿನಸಿ, ಅಕ್ಕಿ ಸಂಗ್ರಹ ಮಾಡೋದು, ಮಳೆಗಾಲಕ್ಕೆ ಬೇಕಾಗುವ ಮಸಾಲೆಪುಡಿ ಮಾಡಿಡುವುದು, ದನಕರುಗಳಿಗೆ ಮೇವು, ಹೆÀಂಚು ಸರಿಪಡಿಸೋದು ಹೀಗೆ ಮಳೆಗಾಲದ ಸಿದ್ಧತೆಗಳು ಎಷ್ಟು ಮಾಡಿದರೂ ಮುಗಿಯೋದೆ ಇಲ್ಲ.

ಮಳೆಗಾಲ ಬಂತೆAದರೆ ಕೊಡಗಿನವರಿಗೆ ಮೊದಲು ನೆನಪಾಗುವುದೇ ಕೊಡೆಗಳು. ಮನೆಯಲ್ಲಿ ಹಿರಿಕರಿದ್ದರೆ ಕೊಡೆಯನ್ನು ಒಮ್ಮೆ ಬಿಚ್ಚಿ ಅದರ ಕಡ್ಡಿ ಹೋಗಿದೆಯಾ, ಹಿಡಿ ಅಲ್ಲಾಡುತ್ತಿದೆಯಾ, ಬಟ್ಟೆ ತೂತಾಗಿದೆಯಾ ಅಂಥ ಪರಿಶೀಲನೆ ಮಾಡಿ, ಪೇಟೆಗೆ ಹೋದಾಗ ಕೊಡೆ ರಿಪೇರಿ ಮಾಡುವವರನ್ನು ಹುಡುಕಿ ಕೊಡೆ ಸರಿಪಡಿಸಿ, ತಂದ ಮೇಲೆ ಮಳೆಗಾಲಕ್ಕೆ ನಾವೂ ಸಿದ್ಧ ಎನ್ನುವ ಭಾವ. ಹಾಗೇ ಕೊಡೆ ರಿಪೇರಿ ಮಾಡುವುದನ್ನೇ ಹದಿನೆಂಟು ವರ್ಷಗಳಿಂದ ಕಾಯಕ ಮಾಡಿಕೊಂಡಿರುವ ವೀರಾಜಪೇಟೆ ನೆಹರು ನಗರದ ನಿವಾಸಿ ಬಶೀರ್ ಒಬ್ಬರೇ ವೀರಾಜಪೇಟೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಕೊಡೆ ರಿಪೇರಿ ಮಾಡುವ ಕಾಯಕಯೋಗಿ ಎಂದರೇ ತಪ್ಪಾಗಲಾರದು.

ಹೊಸ ಕೊಡೆ ಕೊಳ್ಳಬೇಕಾದರೆ ೩೦೦ ರೂಪಾಯಿಂದ ನಾನೂರು ರೂಪಾಯಿಯಷ್ಟು ತಗುಲುತ್ತದೆ. ಅದೇ ಹಳೆ ಕೊಡೆ ತಂದರೆ ಬಶೀರ್ ಹತ್ತು ನಿಮಿಷದಲ್ಲಿ ಹತ್ತಿಪ್ಪತ್ತು ರೂಪಾಯಿಗೆ ಹೊಸ ಕೊಡೆ ಮಾಡಿಕೊಡುತ್ತಾರೆ.

ವೀರಾಜಪೇಟೆ ನಗರದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ನೂರಾರು ಮುರಿದ ಕೊಡೆಗಳನ್ನು ರಿಪೇರಿ ಮಾಡಿರುವ ಬಶೀರ್ ಅವರ ಬದುಕು ಅತಂತ್ರವಾಗಿದೆ. ಕೊಡೆಯ ಕಡ್ಡಿಮುರಿದು ಹೋದರೆ ಆ ಕೊಡೆಯಲ್ಲಿ ಮಳೆಗಾಲ ಕಳೆಯುವುದು ಎಷ್ಟು ಕಷ್ಟವೋ ಹಾಗೇ ಮಳೆಗೆ ಮನೆ, ಆಸ್ತಿ, ಬೆಳೆ ಹಾನಿಯಾದವರ ಬದುಕು ಕೂಡ ಅಷ್ಟೆ ಕಷ್ಟ. ಅಂಥ ಬದುಕು ಮುರಿದುಕೊಂಡವರ ನಡುವೆ ನಾವಿದ್ದೇವೆ. ಅವರಿಗೂ ಮರುಗೋಣ, ಮಿಡಿಯೋಣ. ನಿಜವಾಗಿಯೂ ಬಶೀರ್ ನಂಥ ಕಾಯಕರ್ಮಿಗೆ ಸಮಾಜದ ನೆರವಿನ ಅಗತ್ಯವಿದೆ. ಬಶೀರ್‌ಗೆ ನೆರವು ನೀಡಲು ಇಚ್ಛಿಸುವವರು ಅವರ ಮೊಬೈಲ್ ನಂಬರ್ ಸಂಪರ್ಕಿಸಬಹುದು.

ಬಶೀರ್-೭೭೬೦೦೬೪೧೦೬. - ಉಷಾ ಪ್ರೀತಮ್