ಕುಶಾಲನಗರ, ಜು ೩೦: ದೇಶದಲ್ಲಿ ಎಲ್ಲೆಡೆ ಲಾಕ್‌ಡೌನ್ ಸಡಿಲವಾಗಿ ವ್ಯಾಪಾರ ವಹಿವಾಟು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಮಾತ್ರ ಇನ್ನೂ ಲಾಕ್‌ಡೌನ್ ಮುಂದುವರೆದಿದೆ. ಇಲ್ಲಿನ ಗೋಲ್ಡನ್ ಟೆಂಪಲ್ ನವೆಂಬರ್ ೧೧ರ ತನಕ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಿದೆ.

೨೦೨೦ ರ ಮಾರ್ಚ್ ೧೪ ರಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಕುಶಾಲನಗರ, ಜು ೩೦: ದೇಶದಲ್ಲಿ ಎಲ್ಲೆಡೆ ಲಾಕ್‌ಡೌನ್ ಸಡಿಲವಾಗಿ ವ್ಯಾಪಾರ ವಹಿವಾಟು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಮಾತ್ರ ಇನ್ನೂ ಲಾಕ್‌ಡೌನ್ ಮುಂದುವರೆದಿದೆ. ಇಲ್ಲಿನ ಗೋಲ್ಡನ್ ಟೆಂಪಲ್ ನವೆಂಬರ್ ೧೧ರ ತನಕ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಿದೆ.

೨೦೨೦ ರ ಮಾರ್ಚ್ ೧೪ ರಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ನಂತರ ಟಿಬೇಟಿಯನ್ ಕೇಂದ್ರಕ್ಕೆ ವಿದೇಶಿಗರು ಸೇರಿದಂತೆ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಈಗಾಗಲೇ ೫೦೦ ದಿನಗಳು ಕಳೆದಿದ್ದು ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶಿಬಿರದಲ್ಲಿ ೪೫ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೊಪ್ಪ ಆರೋಗ್ಯ ಸಮುದಾಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ೧೮ರ ಮೇಲ್ಪಟ್ಟವರು ಎರಡನೇ ಲಸಿಕೆ ಪಡೆಯಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಶಿಬಿರದಲ್ಲಿ ಪ್ರಸಕ್ತ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಟಿಬೆಟಿಯನ್ ಶಿಬಿರಕ್ಕೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸ್ಯಾನಿಟೈಸ್ ಮಾಡಿ ಒಳಗೆ ಸೇರಿಸಲಾಗುತ್ತಿದೆ. ಯಾವುದೇ ಗಣ್ಯ ವ್ಯಕ್ತಿಗಳನ್ನು ಕೂಡಾ ಶಿಬಿರದ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಟಿಬೇಟಿಯನ್ ಶಿಬಿರದಲ್ಲಿ ಸಣ್ಣ ಪುಟ್ಟ ಮಕ್ಕಳಿಂದ ನೂರರ ವಯೋಮಾನದ ತನಕ ಬಿಕ್ಷುಗಳಿದ್ದು, ಆರೋಗ್ಯದತ್ತ ಪ್ರಮುಖವಾಗಿ ಗಮನ ನೀಡಲಾಗುತ್ತಿದೆ ಎಂದು ಶಿಬಿರದ ಧರ್ಮಗುರುಗಳು ಮಾಹಿತಿ ನೀಡಿದ್ದಾರೆ. ರಾಜ್ಯ ನೆರೆ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ಶಿಬಿರದ ಗೇಟ್ ತನಕ ತೆರಳಿ ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅಂಗಡಿ ಮುಂಗಟ್ಟುಗಳು ಕಳೆದ ೨ ವರ್ಷಗಳಿಂದ ಬೀಗಜಡಿದಿದ್ದು, ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದೆ. -ಚಂದ್ರಮೋಹನ್