ಸೋಮವಾರಪೇಟೆ, ಜು. ೩೦ : ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ರೂ. ೭೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂತ ಲಾರೆನ್ಸ್ರವರ ನೂತನ ದೇವಾಲಯದ ಉದ್ಘಾಟನೆ ಆ. ೧ ರಂದು (ನಾಳೆ) ಸಂಜೆ ೪ ಗಂಟೆಗೆ ನೆರವೇರಲಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಎಸ್.ಎಂ. ಡಿಸಿಲ್ವಾ ತಿಳಿಸಿದ್ದಾರೆ.

ದೇವಾಲಯದ ಉದ್ಘಾಟನೆಯನ್ನು ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ವಿಲಿಯಂ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮ ಕೇಂದ್ರದ ಗುರುಗಳಾದ ಜೋಸೆಫ್ ಅಲೆಕ್ಸಾಂಡರ್ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.