*ವೀರಾಜಪೇಟೆ, ಜು. ೩೦: ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರನ್ನು ನಡುರಸ್ತೆಯಲ್ಲಿ ಅವರ ಮೇಲೆ ವಾಹನ ಚಲಾಯಿಸಿ ದುಷ್ಕರ್ಮಿಗಳು ಹತ್ಯೆ ನಡೆಸಿದ ಕೃತ್ಯಕ್ಕೆ ವೀರಾಜಪೇಟೆ ವಕೀಲರ ಸಂಘ ಖಂಡಿಸಿದೆ. ದುಷ್ಕರ್ಮಿಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಮಾಡಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೇ ದೇಶದ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್ ಪ್ರಮೋದ್, ಗೌರವ ಕಾರ್ಯದರ್ಶಿ ಎಂ.ಕೆ ದಿನೇಶ್, ಜಂಟಿ ಕಾರ್ಯದರ್ಶಿ ವಿ.ಎಸ್. ಪ್ರೀತಮ್ ಆಗ್ರಹಿಸಿದ್ದಾರೆ.