ಮಡಿಕೇರಿ, ಜು. ೨೯: ಕಳೆದ ವಾರ ಸುರಿದ ಗಾಳಿ-ಮಳೆಯಿಂದ ಗರ್ವಾಲೆಯ ಕೊತ್ತನಮೊಟ್ಟೆಯ ಬಟ್ಟಿಯಂಡ ಅಯ್ಯಪ್ಪ ಎಂಬವರ ಮನೆಯ ಸಿಮೆಂಟ್ ಛಾವಣಿ ಜಖಂಗೊAಡಿದೆ. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಗ್ರಾಮದ ಹಲವು ಮನೆಗಳು ಹಾಳಾಗಿವೆ ಎಂದು ಅಯ್ಯಪ್ಪ ತಿಳಿಸಿದ್ದಾರೆ. ಕೋಟೆಬೆಟ್ಟದ ಕಡೆಯಿಂದ ಗಾಳಿಯು ರಭಸದಿಂದ ಬೀಸುತ್ತಿದ್ದು, ತನ್ನ ಮನೆಯು ಗಾಳಿಯ ವಿರುದ್ಧ ದಿಕ್ಕಿಗೆ ಇರುವುದರಿಂದ ಛಾವಣಿಯು ಪ್ರತಿವರ್ಷ ಜಖಂಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.