ಚೆಯ್ಯಂಡಾಣೆ, ಜು. ೨೯: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಯುಎಇ ಸಮಿತಿ ಆಶ್ರಯದಲ್ಲಿ ದುಬೈನಲ್ಲಿ ಈದ್ ಹಬ್ಬದ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸದಸ್ಯತ್ವ ಅಭಿಯಾನ ಹಾಗೂ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ಸಮಿತಿ ವಹಿಸಿತ್ತು. ಯುಎಇಯ ವಿವಿಧೆಡೆಗಳಲ್ಲಿ ನೆಲೆಸಿರುವ ಜಿಲ್ಲೆಯ ಅನಿವಾಸಿಗಳು ಭಾಗವಹಿಸಿದ್ದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೋಶಾಧಿಕಾರಿ ಅಹ್ಮದ್ ಚಾಮಿಯಾಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸಂಘಟನೆಯ ಕಾರ್ಯವೈಖರಿ ಕುರಿತು ಮಾತನಾಡಿದರು. ಅಬೂಧಾಬಿ ಸಮಿತಿ ಅಧ್ಯಕ್ಷ ಹಂಝ ಪೊನ್ನಂಪೇಟೆ, ರಿಯಾಝ್ ಕೊಂಡAಗೇರಿ, ಅಲಿ ಎಮ್ಮೆಮಾಡು, ಮುಜೀಬ್ ಕಡಂಗ, ಸಲೀಂ ಗುಂಡಿಗೆರೆ, ಹಂಝ ಎಮ್ಮೆಮಾಡು, ಮುಝಮ್ಮಿಲ್ ಚಾಮಿಯಾಲ್, ಮುಝಮ್ಮಿಲ್ ಪಾಲಿಬೆಟ್ಟ, ರಶೀದ್ ಅಶ್ರಫಿ ಕಡಂಗ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ವಾಲಿಬಾಲ್ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಗಫೂರ್ ಎಮ್ಮೆಮಾಡು ಮಾಲೀಕತ್ವದ ಜಿಮ್ಯಾಕ್ ಕ್ಲಬ್ ಮತ್ತು ದ್ವಿತೀಯ ಸ್ಥಾನವನ್ನು ಮುನ್ನ ಕೊಂಡAಗೇರಿ ಮಾಲೀಕತ್ವದ ಪ್ರಾಂಟ್ ತಂಡ ಪಡೆಯಿತು. ಕ್ರಿಕೆಟ್ ಟೂರ್ನಿಯಲ್ಲಿ ಬುಲ್ಲೆಟ್ ಫ್ರೆಂಡ್ಸ್ ಕೊಂಡAಗೇರಿ ತಂಡವು ಪ್ರಥಮ ಸ್ಥಾನ ಮತ್ತು ಚೆರಿಯಪರಂಬು ದ್ವಿತೀಯ ಸ್ಥಾನ ಗಳಿಸಿತು. ಕ್ರೀಡಾಕೂಟದ ಉಸ್ತುವಾರಿಯನ್ನು ಅಕ್ಬರ್ ಗುಂಡಿಗೆರೆ, ಮಿದ್'ಲಾಜ್, ಖಲೀಲ್ ಚಾಮಿಯಾಲ್, ನಿಝಾರ್ ಗುಂಡಿಗೆರೆ ವಹಿಸಿದ್ದರು.