ಕೂಡಿಗೆ, ಜು. ೨೯: ಕೂಡಿಗೆಯ ರಾಷ್ಟಿçÃಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜಾ ಕಾರ್ಯಕ್ರಮವು ಮೂಡ್ಲಿಗೌಡ ಸಭಾಂಗಣದಲ್ಲಿ ನಡೆಯಿತು.

ಗುರುಪೂಜೆ ಕುರಿತು ಸವಿಸ್ತಾರವಾಗಿ ಬೈಲುಕುಪ್ಪೆ ಶಾಖೆ ಹಿರಿಯ ಪ್ರಚಾರಕ ನಾರಾಯಣ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಕೂಡಿಗೆಯ ಹಿರಿಯ ಸ್ವಯಂ ಸೇವಕ ಎಂ.ಬಿ. ಜಯಂತ, ಕೆ. ರಾಜನ್, ಆರ್.ಕೆ. ಕೃಷ್ಣ, ಕೆ.ಕೆ. ಭೋಗಪ್ಪ, ಚಂದ್ರು ಮೂಡ್ಲಿಗೌಡ, ಕುಶಾಲನಗರದ ಮಹೇಶ್, ಅಮಿನ್ ಸೇರಿದಂತೆ ಪುರುಷ ಮತ್ತು ಮಹಿಳಾ ಸ್ವಯಂ ಸೇವಕರು ಭಾಗವಹಿಸಿದ್ದರು.