ಕುಶಾಲನಗರ, ಜು. ೨೮: ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘ ಕೊಡಗು ಜಿಲ್ಲಾ ಘಟಕ, ಕುಶಾಲನಗರ ಪ್ರೆಸ್‌ಕ್ಲಬ್ ಟ್ರಸ್ಟ್ ಕುಶಾಲನಗರ ಹಾಗೂ ಇತರ ಮಾಧ್ಯಮಗಳ ಸಹಕಾರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ “ಕಾವೇರಿ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ತಾ. ೨೯ ರಂದು ಬಿ.ಜಿ.ಟಿ. ಟರ‍್ಸ್ನಲ್ಲಿ ನಡೆಯಲಿದೆ.

ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ. ಮುನಿರಾಜು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪತ್ರಕರ್ತ ಹೆಚ್.ಎಂ. ರಘು ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್. ಇವರು ಮಾಡಲಿದ್ದಾರೆ.