ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಖಗೋಳ ಟೈಮರ್ ಸ್ವಿಚ್ಗಳು
ಬೆಂಗಳೂರು, ಜು. ೨೮: ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಗಳಾದ್ಯಂತ ಖಗೋಳ ಟೈಮರ್ ಸ್ವಿಚ್ಗಳನ್ನು ಅಳವಡಿಕೆ ಮಾಡಲಾಗಿದೆ. ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈ ಟೈಮರ್ ಸ್ವಿಚ್ಗಳು ಸಹಕಾರಿಯಾಗಿದ್ದು ನಗರದ ೮೪ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಈ ಮೂಲಕ ವಾರ್ಷಿಕ ೭೩೦ ಯುನಿಟ್ಗಳಿಂದ ೧೦೯೫ ಯುನಿಟ್ಗಳಷ್ಟು ವಿದ್ಯುತ್ನ್ನು ಉಳಿತಾಯ ಮಾಡಬಹುದಾಗಿದೆ. ಈ ಬಗ್ಗೆ ಮಾತನಾಡಿದ ಕೆ. ಪೂಜ, ವಿಭಾಗೀಯ ಎಲೆಕ್ಟಿçಕಲ್ ಇಂಜಿನಿಯರ್, ಲೈಟ್ಗಳನ್ನು ಆನ್ ಮತ್ತೆ ಆಫ್ ಮಾಡುವುದಕ್ಕೆ ಟೈಮರ್ ನಿಯಂತ್ರಕ ಪಾನಲ್ಗಳನ್ನು ಅಳವಡಿಕೆ ಮಾಡಲಾಗಿದೆ. ಸುಧಾರಿತ ಮೈಕ್ರೋ ಕಂಟ್ರೋಲರ್ ಆಧಾರಿತ ತಂತ್ರಜ್ಞಾನ ಸಾಧನಗಳಾಗಿರುವ ಅಸ್ಟಾçನಮಿಕಲ್ ಟೈಮರ್ ಸ್ವಿಚ್ಗಳು ಸಜ್ಜುಗೊಂಡಿವೆ. ಪ್ರದೇಶದ ರೇಖಾಂಶ ಮತ್ತು ಅಕ್ಷಾಂಶ ಆಧಾರದಲ್ಲಿ ಸೂರ್ಯಾಸ್ತ, ಸೂರ್ಯೋದಕ್ಕೆ ಅನುಗುಣವಾಗಿ ರೈಲ್ವೆ ನಿಲ್ದಾಣಗಳಲ್ಲಿನ ದೀಪಗಳನ್ನು ಈ ಟೈಮರ್ ಸ್ವಿಚ್ಗಳು ನಿಯಂತ್ರಣ ಮಾಡಲಿವೆ ಎಂದು ಪೂಜಾ ವಿವರಿಸಿದ್ದಾರೆ. ಪ್ರಮುಖ ನಿಲ್ದಾಣಗಳ ಹೊರತಾಗಿ ಸಂಪಿಗೆ ರಸ್ತೆ, ಗುಬ್ಬಿ, ನಿಟ್ಟೂರು, ರಾಯಕೊಟೈ, ಕೆಲಮಂಗಲA, ನಾಗಸಮುದ್ರಂ, ಬಸಂಪಲ್ಲಿ, ಬಿಸನಟ್ಟಂ, ಯೆಲಿಯೂರು, ಮುಲನೂರು, ಚಿಂತಾಮಣಿಗಳಲ್ಲೂ ಈ ಮಾದರಿಯ ಸ್ವಿಚ್ಗಳನ್ನು ಅಳವಡಿಸಲಾಗಿದೆ ಎಂದು ಪೂಜಾ ಮಾಹಿತಿ ನೀಡಿದ್ದಾರೆ. ಈ ನಿಲ್ದಾಣಗಳಲ್ಲಿ ದೀಪಗಳನ್ನು ನಿಯಂತ್ರಿಸುವ ಸಿಬ್ಬಂದಿಗಳು ಇಲ್ಲ. ಆದ್ದರಿಂದ ವಿದ್ಯುತ್ ಉಳಿತಾಯ ಮಾಡುವುದಕ್ಕೆ ಈ ಕ್ರಮ ನೆರವಾಗಲಿದ್ದು ಹಾಸನ ಜಿಲ್ಲೆಯ ೧೧ ರೈಲ್ವೆ ನಿಲ್ದಾಣಗಳಿಗೂ ಶೀಘ್ರವೇ ಇದನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾಗೆ ೩೨ ಬಲಿ
ಬೆಂಗಳೂರು, ಜು. ೨೮: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಇಂದು ೧,೫೦೧ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೮,೯೭,೬೬೪ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೩೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೬,೪೩೭ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೫೪ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೨೫,೫೮೧ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೫ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೨,೦೩೯ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೩೮,೭೧೭ಕ್ಕೆ ಏರಿಕೆಯಾಗಿದೆ. ಇನ್ನು ೨೨,೪೮೭ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೦೨,೪೯೪ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೫೦೧ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧.೪೬ಕ್ಕೆ ಇಳಿದಿದೆ.
ಸಹಜ ಸ್ಥಿತಿಗೆ ಬಂದ ನಂತರ ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ
ನವದೆಹಲಿ, ಜು. ೨೮: ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಿದ ನಂತರ ಸೂಕ್ತ ಸಮಯದಲ್ಲಿ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿನಲ್ಲಿ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವಿದೆಯೇ ಮತ್ತು ವಿವಿಧ ಸಂವಹನ ವಿಧಾನಗಳ ಮೇಲಿನ ವರ್ಷವಿಡೀ ನಿಷೇಧವನ್ನು ಕೊನೆಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಜಮ್ಮು-ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದ ನಂತರ ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ರೈ ಹೇಳಿದರು. ಸಂವಿಧಾನಾತ್ಮಕ ಬದಲಾವಣೆ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಾಗಿದೆ. ರಾಷ್ಟಿçÃಯ ಹಿತಾಸಕ್ತಿ ಮತ್ತು ಕಾಶ್ಮೀರದ ಭದ್ರತೆಯ ಹಿತದೃಷ್ಟಿಯಿಂದ, ವಿವಿಧ ಸಂವಹನ ಮಾರ್ಗಗಳಾದ ಅಂತರ್ಜಾಲ ಮತ್ತು ಮೊಬೈಲ್ ಸೇವೆಗಳ ಮೇಲೆ ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸಚಿವರು ಹೇಳಿದರು. ಈ ವಿಷಯವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿದೆ ಮತ್ತು ಹೇರಿದ ನಿರ್ಬಂಧಗಳನ್ನು ಹಂತಹAತವಾಗಿ ಸಡಿಲಿಸಲಾಗುತ್ತಿದೆ. ಫೆಬ್ರವರಿ ೫ ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ೪ ಜಿ ಇಂಟರ್ನೆಟ್ ಡೇಟಾ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಟೋಕಿಯೊ ಒಲಿಂಪಿಕ್ಸ್: ಪಿ.ವಿ. ಸಿಂಧುಗೆ ಭರ್ಜರಿ ಜಯ
ಟೋಕಿಯೊ, ಜು. ೨೮: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡ ಬುಧವಾರ ಶುಭಾರಂಭ ಮಾಡಿದ್ದು, ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಭರ್ಜರಿ ಜಯ ಸಾಧಿಸಿದ್ದಾರೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಪಿ.ವಿ. ಸಿಂಧು ಹಾಂಕಾAಗ್ನ ನ್ಗಾನ್ ಯಿ ಚೆಯುಂಗ್ ವಿರುದ್ಧ ೨೧-೯, ೨೧-೧೬ ನೇರ ಸೆಟ್ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಪಂದ್ಯದ ಆರಂಭದಿAದಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಪಿ.ವಿ. ಸಿಂಧು ಮೊದಲ ಸೆಟ್ನಲ್ಲಿ ೨೧-೯ರಲ್ಲಿ ಮುನ್ನಡೆ ಸಾಧಿಸಿದರು. ಬಳಿಕ ೨ನೇ ಸೆಟ್ನಲ್ಲಿ ನ್ಗಾನ್ ಯಿ ಚೆಯುಂಗ್ ಕೊಂಚ ವಿರೋಧ ತೋರಿದರಾದರೂ ೨ನೇ ಸೆಟ್ ಅನ್ನೂ ಕೂಡ ಸಿಂಧು ೨೧-೧೬ ಅಂತರದಲ್ಲಿ ತಮ್ಮದಾಗಿಸಿಕೊಂಡು ಜಯ ಸಾಧಿಸಿ ಟೂರ್ನಿಯ ಮುಂದಿನ ಹಂತಕ್ಕೆ ಮುನ್ನಡೆದಿದ್ದಾರೆ.
ಬಿಜೆಪಿ ಸರ್ಕಾರ ಪತನವಾದರೆ ಚುನಾವಣೆಗೆ ಕಾಂಗ್ರೆಸ್ ರೆಡಿ
ಬೆಳಗಾವಿ, ಜು. ೨೮: ರಾಜ್ಯದಲ್ಲಿ ಮಧ್ಯಂತರ ಚುನಾವಣೆಯನ್ನು ಎಂದಿಗೂ ಇಷ್ಟಪಡುವುದಿಲ್ಲ ಆದರೆ, ಒಂದು ವೇಳೆ ಬಿಜೆಪಿ ಸರ್ಕಾರ ತಾನಾಗಿಯೇ ಪತನವಾದರೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿರುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಖಾನಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲಾ ಸಚಿವರು ಭ್ರಷ್ಟರಾಗಿದ್ದರು. ಪಕ್ಷಾಂತರಗೊAಡ ೧೭ ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಕಾರಣ ರಾಜ್ಯದ ಬಿಜೆಪಿ ಸರ್ಕಾರ ನ್ಯಾಯಸಮ್ಮತವಾಗಿಲ್ಲ. ಮೊಟ್ಟೆ ಖರೀದಿ ಹಗರಣದಲ್ಲಿ ಶಶಿಕಲಾ ಜೊಲ್ಲೆ ಅವರಿಂದ ರಾಜೀನಾಮೆಯನ್ನು ಯಡಿಯೂರಪ್ಪ ಪಡೆಯಲೇ ಇಲ್ಲ ಎಂದರು. ರಾಷ್ಟಿçÃಯ ಪಕ್ಷವಾಗಿ ಕಾಂಗ್ರೆಸ್ಗೆ ರಾಷ್ಟçಮಟ್ಟದಲ್ಲಿ ಹೈಕಮಾಂಡ್ ಇದೆ ಮತ್ತು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಇತರ ಪಕ್ಷದ ಕಾರ್ಯಕರ್ತರಿದ್ದಾರೆ. ಆದರೆ, ಬಿಜೆಪಿಗೆ ಇಂತಹ ರೀತಿ ಇಲ್ಲ, ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಎಂಬುದಿಲ್ಲ. ಆದರೆ ಜೆಡಿಎಸ್ನಲ್ಲಿ ಕೇವಲ ಒಂದು ಕಮಾಂಡ್ ಇದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಆದರೆ, ಕೇಂದ್ರಿಯ ನಾಯಕತ್ವದಿಂದ ವಜಾ ಮಾಡಲಾಗುತ್ತದೆ. ಬಿಜೆಪಿಯಲ್ಲಿ ಮುಖಂಡರ ಯಾವುದೇ ಪಾತ್ರವಿಲ್ಲ, ಅದನ್ನು ಪ್ರಜಾಪ್ರಭುತ್ವ ಎಂದು ಕರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ, ೨೦೦೮, ೨೦೧೩ ಮತ್ತು ೨೦೧೮ರಲ್ಲಿ ಬಿಜೆಪಿ ಸರ್ಕಾರವಿತ್ತು ಆದರೆ, ಬಹುಮತ ವಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ೨೦೨೩ರ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಶೇ.೧೦೦ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಯಡಿಯೂರಪ್ಪ ಅಥವಾ ಬಿಜೆಪಿಯ ಯಾವುದೇ ನಾಯಕರಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ತರಲು ಸಾಧ್ಯವಿಲ್ಲ, ಸಂಪೂರ್ಣ ಭ್ರಷ್ಟವಾಗಿರುವ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದರು. ಖಾನಾಪುರ ಮತ್ತು ಬೆಳಗಾವಿ ಸುತ್ತಮುತ್ತಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಸಿದ್ದರಾಮಯ್ಯ, ಪ್ರವಾಹದ ಬಿಕ್ಕಟ್ಟಿನಿಂದ ರಾಜ್ಯ ಹೊರಬರಲು ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಇತರ ಅನೇಕ ರಾಜ್ಯಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವುದಿಲ್ಲ, ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವನ್ನು ಸಹ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್ ಮುಖಂಡರನ್ನೊಳಗೊAಡ ಅನೇಕ ತಂಡಗಳನ್ನು ರಚಿಸಿರುವುದಾಗಿ ತಿಳಿಸಿದರು.