ಸೋಮವಾರಪೇಟೆ, ಜು. ೨೮: ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ೨೦೨೧-೨೨ನೇ ಸಾಲಿನ ಅಧ್ಯಕ್ಷರಾಗಿ ಸಿ.ಕೆ. ಮಲ್ಲಪ್ಪ ಅಧಿಕಾರ ವಹಿಸಿಕೊಂಡರು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎನ್. ತೇಜಸ್ವಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲಯನ್ಸ್ ಮತ್ತು ಲಿಯೋ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಅರವಿಂದ ಶೆಣೈ ಕುಡ್ಪಿ ಅವರು, ೧೦೦ ವರ್ಷಗಳ ಇತಿಹಾಸ ಇರುವ ಅಂರ್ರಾಷ್ಟಿçÃಯ ಲಯನ್ಸ್ ಸಂಸ್ಥೆ ಸೇವೆ ಮತ್ತು ಸ್ನೇಹ ಎಂಬ ಎರಡು ಸ್ತಂಭದ ಆಧಾರದಲ್ಲಿ ನಿಂತಿದೆ. ಜನರು ಸ್ವ ಇಚ್ಛೆಯಿಂದ ಸಂಸ್ಥೆಯ ಸದಸ್ಯತ್ವದೊಂದಿಗೆ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸೇವೆಯಿಂದ ಸಾರ್ಥಕತೆ ಲಭಿಸುತ್ತದೆ ಎಂದರು.
ನೂತನ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಕೆ. ಮಲ್ಲಪ್ಪ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಸ್ಥೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮುಂದೆಯೂ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸಿಗೆ ಎಲ್ಲಾ ಸದಸ್ಯರು ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ನೂತನ ಸಾಲಿನ ಪ್ರಧಾನ ಕಾರ್ಯದರ್ಶಿ ಯಾಗಿ ಜಿ.ಎಸ್. ರಾಜರಾಮ್, ಖಜಾಂಚಿಯಾಗಿ ಸಿ.ಕೆ. ರಾಜೀವ್, ಲಿಯೋ ಸಂಸ್ಥೆಯ ಕಾರ್ಯದರ್ಶಿ ಯಾಗಿ ಅಂಜು, ಖಜಾಂಚಿಯಾಗಿ ವಿನೇಶ್ ಪ್ರಮಾಣ ವಚನ ಸ್ವೀಕರಿಸಿದರು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ, ವಲಯಾಧ್ಯಕ್ಷ ಗ್ಲೆನ್ ಮೆನೇಜಸ್, ನಿಕಟಪೂರ್ವ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್.ಎನ್. ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಲಾಯಿತು.