ನಾಪೋಕ್ಲು, ಜು. ೨೬: ಭಾನುವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಸಮೀಪದ ದೊಡ್ಡ ಪುಲಿಕೋಟು ಗ್ರಾಮದ ಅಪ್ಪಚ್ಚಿರ ಬೊಳ್ಯಪ್ಪ ಎಂಬವರ ಮನೆಯ ಗೋಡೆಗಳಿಗೆ ಹಾನಿಯಾಗಿವೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ದಾನೇಶ್ವರಿ, ಪಿಡಿಒ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.