ಮಡಿಕೇರಿ, ಜು. ೨೬ : ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಂದೇ ಶಿಕ್ಷಣ ಸಂಸ್ಥೆಯಲ್ಲಿ ನೀಡುತ್ತಿರುವ ಸುಂಟಿಕೊಪ್ಪ ಎಸ್‌ಎಂಎಸ್ ಅರೇಬಿಕ್ ಕಾಲೇಜಿನಲ್ಲಿ ಉಚಿತ ದಾಖಲಾತಿ ಆರಂಭಗೊAಡಿದೆ.
೧೦ನೇ ತರಗತಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ತಾ. ೨೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ಪ್ರವೇಶಾತಿ ಪರೀಕ್ಷೆ ನಡೆಸಲಾಗುವುದು ಎಂದು ಕಾಲೇಜಿನ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.
ಕಂಪ್ಯೂಟರ್ ಶಿಕ್ಷಣ, ವ್ಯಕ್ತಿತ್ವ ವಿಕಸನ ತರಬೇತಿ, ಸಾಮಾನ್ಯ ಜ್ಞಾನ, ಕಲಿಕೆ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಊಟ, ವಸತಿ, ಪಠ್ಯ ಉಪಕರಣ, ತುರ್ತು ವೈದ್ಯಕೀಯ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಬಾಲಕರಿಗೆ ಮಾತ್ರ ಅವಕಾಶವಿದ್ದು, ಯಾವುದೇ ಶುಲ್ಕವನ್ನು ಪಡೆಯವುದಿಲ್ಲವೆಂದು ಅವರು ಹೇಳಿದ್ದಾರೆ.
ಕನ್ನಡ, ಮಲೆಯಾಳಂ, ಅರೇಬಿಕ್ ಹಾಗೂ ಇಂಗ್ಲೀಷ್ ಭಾಷಾ ಕಲಿಕೆಗೆ ತರಬೇತಿ ಮತ್ತು ಭಾಷಣ, ಲೇಖನ, ಪ್ರಬಂಧ ಕಲೆಗೂ ಉತ್ತೇಜನ ನೀಡಲಾಗುವುದು.
ಪ್ರಸ್ತುತ ಆಧುನಿಕ ಯುಗದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣದ ಅನಿವಾರ್ಯತೆ ಎದುರಾದಾಗ ಬಡಮಕ್ಕಳಿಗೆ ಈ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಬೇಕೆನ್ನುವ ಉದ್ದೇಶದಿಂದ ೨೦೧೬ರಲ್ಲಿ ಸುಂಟಿಕೊಪ್ಪದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು.
ದಾಖಲಾತಿ ಮತ್ತು ಪ್ರವೇಶ ಪರೀಕ್ಷೆಯ ಮಾಹಿತಿಗಾಗಿ ಮೊ.ಸಂ ೭೮೯೯೮೯೧೪೯೪, ೯೪೪೯೨೬೭೧೭೭ ನ್ನು ಸಂಪರ್ಕಿಸುವAತೆ ಸಿ.ಎಂ. ಹಮೀದ್ ಮೌಲವಿ ಮನವಿ ಮಾಡಿದ್ದಾರೆ.