ಕಣಿವೆ, ಜು. ೨೬: ಕೊಡಗು ಜಿಲ್ಲೆಯ ಎರಡನೆಯ ಕಿರು ಜಲಾಶಯ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯದಿಂದ ಅಲ್ಲಿನ ಅಚ್ಚುಕಟ್ಟು ಕೃಷಿಕರಿಗೆ ಭತ್ತದ ಬೇಸಾಯಕ್ಕೆ ನಾಲೆಯ ಮೂಲಕ ೪೦ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ.
ಸೋಮವಾರ ಸಂಜೆ ಜಲಾಶಯದ ನಾಲಾ ಕ್ರೆಸ್ಟ್ ಗೇಟಿಗೆ ಪೂಜೆ ಸಲ್ಲಿಸುವ ಮೂಲಕ ನೀರನ್ನು ಹರಿಬಿಡಲಾಗುತ್ತಿದೆ.
ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಹಾಗೂ ಸಹಾಯಕ ಇಂಜಿನಿಯರ್ ಕಿರಣ್ ಈ ಸಂದರ್ಭ ಉಪಸ್ಥಿತರಿದ್ದರು.
ಮಹೇಂದ್ರ ಕುಮಾರ್ ಮಾತನಾಡಿ ಚಿಕ್ಲಿಹೊಳೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ೨೧೩೭ ಎಕರೆ ಕೃಷಿ ಭೂಮಿಗೆ ಎಡ ದಂಡೆ ಕಾಲುವೆಗೆ ೨೦ ಹಾಗೂ ಬಲ ದಂಡೆ ನಾಲೆಗೆ ೨೦ ಕ್ಯೂಸೆಕ್ಸ್ ನಂತೆ ಒಟ್ಟು ೪೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದರು.