ಕುಶಾಲನಗರ/ ಗುಡ್ಡೆಹೊಸೂರು, ಜು.೨೭: ಗುಡ್ಡೆಹೊಸೂರು - ಬಾಳುಗೋಡು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬAಧಿಸಿ ದಂತೆ ರಸ್ತೆಬದಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ನಡೆಯಿತು. ಗುಡ್ಡೆಹೊಸೂರು -ಸಿದ್ದಾಪುರ ಜಂಕ್ಷನ್ ಬಳಿ ವ್ಯಕ್ತಿಯೊಬ್ಬರು ರಸ್ತೆಬದಿಯಲ್ಲಿ ಅಳವಡಿಸಿದ್ದ ಆವರಣ ಗೋಡೆಯನ್ನು ತೆರವುಗೊಳಿಸಲು ಸಂಬAಧಿಸಿದ ಇಲಾಖೆಯಿಂದ ಸೂಚನೆ ನೀಡಿದರೂ ತೆರವುಗೊಳಿಸದ ಕಾರಣ ಪೊಲೀಸರ ರಕ್ಷಣೆ ಜೊತೆಗೆ ಗ್ರಾ.ಪಂ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಗುಡ್ಡೆಹೊಸೂರು - ಬಾಳುಗೋಡು ರಾಜ್ಯ ಹೆದ್ದಾರಿ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗೆ ಅಂದಾಜು ರೂ. ೧೩ ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ನಾಗರಿಕ ವೇದಿಕೆ ಪ್ರಮುಖರು ದೂರಿದ್ದರು. ಈ ಬಗ್ಗೆ ‘ಶಕ್ತಿ’ ಯಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿತ್ತು. ಸಂಬAಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಸಲು ಕ್ರಮಕೈಗೊಂಡಿದ್ದಾರೆ.

ಕಾರ್ಯಾಚರಣೆ ಸಂದರ್ಭ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಮೋಹನ್ ಕುಮಾರ್, ಪೀಟರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ಯಾಂ, ಸ್ಥಳೀಯ ಜನಪ್ರತಿನಿಧಿಗಳಾದ ಪ್ರದೀಪ್, ಸಲಿ, ನಾಗರಿಕ ವೇದಿಕೆ ಪ್ರಮುಖರಾದ ನಂಗಾರು ಜಗ, ಬಗ್ಗನ ಅನಿಲ್, ಮಚ್ಚಂಡ ಅಶೋಕ್, ಮತ್ತಿತರರು ಇದ್ದರು.