ಮಡಿಕೇರಿ, ಜು. ೨೭: ಕೋವಿಡ್‌ನಿಂದ ಲಾಕ್‌ಡೌನ್ ಹಾಗೂ ಮಳೆಗಾಲದ ಸಮಸ್ಯೆ ಇದ್ದರೂ ಕೂಡ ಗ್ರಾಹಕರಿಗೆ ಅಗತ್ಯ ವಿದ್ಯುಚ್ಛಕ್ತಿ ಪೂರೈಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ನಿರಂತರ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ.

ಯಾವುದೇ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಆರ್ಥಿಕವಾಗಿ ಸದೃಡವಾಗಬೇಕಿದೆ. ಆದರೆ, ಲಾಕ್‌ಡೌನ್ ಸಮಸ್ಯೆ ಹಾಗೂ ಮಳೆಗಾಲದ ಅವಧಿಯಾಗಿರುವುದರಿಂದ ಕೆಲವು ಗ್ರಾಹಕರು ವಿದ್ಯುತ್ ಬಿಲ್ಲು ಪಾವತಿಸಲು ಮುಂದೆ ಬರುತ್ತಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ, ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ಲು ಪಾವತಿಸುವಂತೆ ಸೆಸ್ಕ್ ಕೋರಿದೆ.

ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಬಹುದಾಗಿದ್ದು, ನೆಟ್ ಬ್ಯಾಂಕಿAಗ್, ಫೋನ್ ಪೇ, ಪೇಟಿಎಂ, ಗೂಗಲ್ ಪೇ, ಅಮೆಜಾನ್ ಪೇ, ಏರ್‌ಟೆಲ್ ಮನಿ, ಭಾರತ್ ಬಿಲ್ ಪೇ, ಜಿಯೋ ಮನಿ ಹಾಗೂ ಇತರೆ ಡಿಜಿಟಲ್ ಪೇಮೆಂಟ್ ಮೂಲಕ ವಿದ್ಯುತ್ ಬಿಲ್ಲು ಪಾವತಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಕೋರಿದ್ದಾರೆ.