ನಾಪೋಕ್ಲು, ಜು. ೨೭: ಮುಂಗಾರು ಮಳೆಯ ಭೋರ್ಗರೆತದೊಂದಿಗೆ
ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಮಾದಂಡ ಅಬ್ಬಿ ಜಲಪಾತವೂ ಒಂದು. ಕೊಡಗಿನಲ್ಲಿ
ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತಿದ್ದು, ಅವುಗಳಲ್ಲೊಂದು ನದಿಯಿಂದ ಉದ್ಭವಿಸಿದ ಮಾದಂಡ ಅಬ್ಬಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಬಂಡೆ ಕಲ್ಲುಗಳ ಮೇಲಿನಿಂದ ಧುಮುಕುವ ಈ ಜಲಪಾತ ಮನಮೋಹಕವಾಗಿದೆ.
ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಎತ್ತರೆತ್ತರಕ್ಕೇರುತ್ತಿದ್ದಂತೆ ಬಲಕ್ಕೆ ತಿರುಗಿ ಸಾಗಿದರೆ ಮಾದಂಡ ಅಬ್ಬಿ ತಲುಪಬಹುದು. ಮಳೆಗಾಲದಲ್ಲಿ ಸಂತೋಷದಿAದ ಜಲಧಾರೆಯ ಸೊಬಗು ಸವಿಯಬಹುದು. ಇದರ ನೋಟ ದೂರದ ಇಗ್ಗುತ್ತಪ್ಪ ಬೆಟ್ಟಕ್ಕೂ ಕಾಣಸಿಗುತ್ತದೆ. ಜಲಪಾತಕ್ಕೆ ತೆರಳುವ ರಸ್ತೆಗಳು ಉತ್ತಮವಾಗಿಲ್ಲ. ಪ್ರವಾಸಿಗರಿಗೆ ದಾರಿ ಸೂಚಕಗಳಿಲ್ಲ.
-ದುಗ್ಗಳ ಸದಾನಂದ