ನಾಪೋಕ್ಲು, ಜು. ೨೭: ಪಾರಾಣೆ-ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದ ಮನೆಯ ಬಳಕೆಗಾಗಿ ಮನೆಯ ಪಕ್ಕದ ಶೆಡ್ನಲ್ಲಿ ಅಳವಡಿಸಿಟ್ಟಿದ್ದ ಜನರೇಟರ್ ಅನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಹೊದವಾಡ ಗ್ರಾಮದ ಬಿ.ಎಂ. ಹಮೀದ್ (೩೫), ಬೀಟೆಬಾಣೆ ಎ. ಬದ್ರುದ್ದೀನ್ ಬಂಧಿತರು.
ಜನರೇಟರ್ ಕಳವು ಆಗಿರುವ ಬಗ್ಗೆ ಜು. ೨೬ ರಂದು ಕೊಡಂದೇರ ಸುಬ್ಬಯ್ಯ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಠಾಣೆಯಲ್ಲಿ ಕಲಂ: ೪೫೪, ೪೫೭, ೩೮೦ ಐಪಿಸಿ ಸೆಕ್ಷನ್ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್, ಎಎಸ್ಐ ಕುಶಾಲಪ್ಪ, ಸಾಜನ್, ರವಿಕುಮಾರ್, ಮಹೇಶ್, ನವೀನ್ ಇದ್ದರು. ಬಂಧಿತರಿAದ ರೂ. ೪೫ ಸಾವಿರ ಬೆಲೆ ಬಾಳುವ ಜನರೇಟರ್ ಮತ್ತು ಇದನ್ನು ಕಳವು ಮಾಡಲು ಉಪಯೋಗಿಸಿದ್ದ ರೂ. ೨.೫ ಲಕ್ಷ ಮೌಲ್ಯದ ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.