ಮಡಿಕೇರಿ, ಜು. ೨೮: ಮಡಿಕೇರಿ ನಗರದ ಸ್ಟೋನ್ ಹಿಲ್ ಬಳಿಯ ಕಸ ವಿಲೇವಾರಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ಪ್ರಕರಣವನ್ನು ನ್ಯಾಯಾಲಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಸಕರುಗಳು ಮಧ್ಯಪ್ರವೇಶ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯ, ಈ ಸಂಬAಧ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಸ್ಟೋನ್ ಹಿಲ್ ಬಳಿ ಸುರಿದಿರುವ ಕಸದ ರಾಶಿಯ ರಕ್ಷಣೆ ಹಾಗೂ ವಿಲೇವಾರಿಗೆ ಸಂಬAಧಿಸಿದAತೆ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ನಗರಸಭೆಯಿಂದ ಸಲ್ಲಿಸಲಾಗಿದ್ದ ಮಾಹಿತಿ ಸುಳ್ಳು ಎಂದು ಅರ್ಜಿದಾರರಾದ ಎಸ್‌ಆರ್‌ವಿಕೆ ಸಂಘದ ಪರ ವಕೀಲರು ಹೇಳಿದ್ದರಿಂದ ಈ ಸಂಬAಧ ಪರಿಶೀಲನೆ ನಡೆಸಲು ಸರಕಾರಿ ಅಧಿಕಾರಿಗಳ ತಂಡವನ್ನು ನ್ಯಾಯಾಲಯ ನಿಯೋಜಿಸಿತ್ತು. ಅಧಿಕಾರಿಗಳು ಪರಿಶೀಲನೆಗೆಂದು ಭೇಟಿ ನೀಡಿದ್ದ ಸಂದರ್ಭ ಪೌರಾಯುಕ್ತರು ಗೈರಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಪೌರಾಯುಕ್ತರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನಗರಸಭೆ ವತಿಯಿಂದ ಕಸದ ರಕ್ಷಣೆ ಸಂಬAಧ ಕೆಲಸ ಮಾಡುತ್ತಿದ್ದ ಸಂದರ್ಭ ಅರ್ಜಿದಾರರು ಶಾಸಕರುಗಳನ್ನು ಕರೆತಂದು ಕೆಲಸಕ್ಕೆ ತಡೆಯೊಡ್ಡಿದ್ದಾರೆ. ಶಾಸಕರು ಸೂಚನೆ ನೀಡಿದ ಮೇರೆಗೆ ತ್ಯಾಜ್ಯ ಹಾಕಲು ತೆಗೆದಿದ್ದ ಗುಂಡಿಯನ್ನು ಮುಚ್ಚಲಾಗಿದೆ ಎಂಬಿತ್ಯಾದಿ ಅಂಶಗಳ ಮಾಹಿತಿ ನೀಡಿದ್ದಾರೆ.

ಇದರಿಂದ ಗರಂ ಆದ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಒಕ ಅವರು, ಪ್ರಕರಣವನ್ನು ನ್ಯಾಯಾಲಯ ನಿರ್ವಹಣೆ ಮಾಡುತ್ತಿರುವಾಗ ಬೇರೆಯವರು ಏಕೆ ಮೂಗು ತೂರಿಸಬೇಕು, ಶಾಸಕರ ಬಳಿ ಹೋಗುವದಿದ್ದರೆ ನ್ಯಾಯಾಲಯಕ್ಕೆ ಏಕೆ ಬರಬೇಕಿತ್ತು ಎಂದು ಪ್ರಶ್ನಿಸಿದರಲ್ಲದೆ, ಮುಚ್ಚಿರುವ ಗುಂಡಿಯನ್ನು ಮತ್ತೆ ತೆರೆಯುವಂತೆ ಹೇಳಿದರು. ಈ ರೀತಿ ಮಾಡುವದಾದರೆ ಅರ್ಜಿಯನ್ನು ವಜಾ ಮಾಡಲಾಗುವದು, ಅರ್ಜಿದಾರರಿಗೂ, ಶಾಸಕರುಗಳಿಗೂ ನೋಟೀಸ್ ನೀಡಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ಅರ್ಜಿದಾರರ ಪರ ವಕೀಲರಾದ ಅನುಚಂಗಪ್ಪ ಅವರು, ಅರ್ಜಿದಾರರು ಶಾಸಕರನ್ನು ಕರೆದು ಕೊಂಡು ಹೋಗಿಲ್ಲ, ಮದೆನಾಡು ಗ್ರಾಮಸ್ಥರು ಕರೆದುಕೊಂಡು ಬಂದು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಕೊಡಗಿನಲ್ಲಿ ಹೆಚ್ಚು ಮಳೆ ಇರುವದರಿಂದ ಗುಂಡಿ ತೆರೆದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದಾರೆ. ಎಲ್ಲ ಮಾಹಿತಿಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಾಧೀಶರು, ಈ ಸಂಬAಧದ ಮುಂದಿನ ವಿಚಾರಣೆಯನ್ನು ಆ. ೧೭ಕ್ಕೆ ಕಾಯ್ದಿರಿಸಿದ್ದಾರೆ. -ಸಂತೋಷ್