ಮಧ್ಯಮ ವರ್ಗದ ವರ್ತಕರಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಕಳೆದ ೨೫ ವರ್ಷಗಳಿಂದ ಬೇಕರಿ ಉದ್ಯಮ ನಡೆಸಿಕೊಂಡು ಬಂದಿದ್ದೇವೆ. ಆದರೆ ಇದೀಗ ಬಂದಿರುವ ಸಮಸ್ಯೆ ಅತ್ಯಂತ ಕಷ್ಟದಾಯಕವಾಗಿದೆ. ಬೇಕರಿಯನ್ನೆ ನಂಬಿಕೊAಡು ವಾಸದ ಮನೆಯ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆಯ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುತ್ತಿದ್ದೇವೆ. ಇದೀಗ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ವ್ಯಾಪಾರೋದ್ಯಮ ಸಂಪೂರ್ಣ ಕುಸಿತ ಕಂಡಿದೆ. ಮುಂದೇನು ಎಂಬ ಚಿಂತೆ ಆರಂಭಗೊAಡಿದೆ. ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ.

ಪಿ.ಕೆ. ಪ್ರವೀಣ್, ವರ್ತಕ, ಗೋಣಿಕೊಪ್ಪ

ನಾಯಿ ಕೊಡೆಗಳಂತೆ ತರಕಾರಿ ಅಂಗಡಿಗಳು

ಗೋಣಿಕೊಪ್ಪ ತರಕಾರಿ ಮಾರುಕಟ್ಟೆಗೆ ತನ್ನದೇ ಆದ ಅಸ್ತಿತ್ವವಿದೆ. ತರಕಾರಿ ಮಾರುಕಟ್ಟೆಯನ್ನು ನಂಬಿಕೊAಡು ಜೀವನ ನಡೆಸಿ ಆರ್ಥಿಕ ಸುಧಾರಣೆ ಕಂಡಿದ್ದೇವೆ. ಸದಾ ಜನರಿಂದ ಮಾರುಕಟ್ಟೆ ತುಂಬಿರುತ್ತಿತ್ತು ಹಾಗೂ ಎಲ್ಲರಿಗೂ ವ್ಯಾಪಾರವಾಗುತ್ತಿತ್ತು. ಇದರಿಂದ ಪಂಚಾಯಿತಿಗೂ ಆದಾಯ ಬರುತ್ತಿತ್ತು. ಆದರೆ ಇದೀಗ ನಾಯಿಕೊಡೆಗಳಂತೆ ಸಿಕ್ಕಿದ ಜಾಗದಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಮಾರ್ಕೆಟ್ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಗೆ ಖಾಲಿ ಜಾಗವಿದೆ. ಇಲ್ಲಿ ವ್ಯಾಪಾರ ಮಾಡಬಹುದು. ಆದರೆ ಹೊರ ಜಿಲ್ಲೆಯಿಂದ ಆಗಮಿಸುವವರು ರಸ್ತೆ ಬದಿಯಲ್ಲಿಯೇ ವ್ಯಾಪಾರ ನಡೆಸಿ ತೆರಳುತ್ತಿದ್ದಾರೆ. ಇದರಿಂದ ಇಲ್ಲಿಯ ಖಾಯಂ ವರ್ತಕರಿಗೆ ವ್ಯಾಪಾರ ಕೈ ತಪ್ಪಿದೆ.

ಎಂ.ಆರ್. ರಫೀಕ್, ಅಧ್ಯಕ್ಷರು ಮಾರುಕಟ್ಟೆ ಸಮಿತಿಕಟ್ಟಲು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರವನ್ನೇ ನಂಬಿಕೊAಡು ಬ್ಯಾಂಕ್‌ಗಳಲ್ಲಿ, ಫೈನಾನ್ಸ್ಗಳಲ್ಲಿ ಲಕ್ಷಾಂತರ ಸಾಲ ಮಾಡಿ ಮೊಬೈಲ್ ಅಂಗಡಿ, ದಿನಸಿ, ಬೇಕರಿ, ತರಕಾರಿ, ಮಾಂಸದ ಅಂಗಡಿ, ಬಟ್ಟೆ, ಚಪ್ಪಲಿ ಶೂ ಅಂಗಡಿ ಸೇರಿದಂತೆ ಇನ್ನಿತರ ಮಳಿಗೆಗಳನ್ನು ತೆರೆದಿರುವ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ಅಂಗಡಿಗಳಷ್ಟೇ ತೆರೆದು ವ್ಯಾಪಾರ ವಹಿವಾಟು ನಡೆಸಿದ್ದವು. ಇದೀಗ ಎಲ್ಲಾ ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಮಾತ್ರ ನಗರಕ್ಕೆ ಆಗಮಿಸುವುದು ಕಡಿಮೆಯಾಗಿದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅಂಗಡಿ ತೆರೆದ ವರ್ತಕರು ಅಂಗಡಿಗಳನ್ನು ಮುಚ್ಚಿ ತೆರಳುವ ಮನಸ್ಸು ಮಾಡಿದ್ದಾರೆ. ಕೆಲವು ಅಂಗಡಿಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ರೂಪಾಯಿ ಕೂಡ ವ್ಯಾಪಾರವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಕಾಲದಲ್ಲಿ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ವ್ಯಾಪಾರೋದ್ಯಮ ಆರಂಭಿಸಿದರೆ ಬದುಕು ಕಟ್ಟಿಕೊಳ್ಳಬಹುದು ಎಂಬ ಕಾರಣದಿಂದ ಸಮೀಪದ ಕೇರಳ ರಾಜ್ಯದಿಂದ ಬಹುತೇಕ ಮಂದಿ ನಗರಕ್ಕೆ ಆಗಮಿಸಿ ವ್ಯಾಪಾರೋದ್ಯಮ ಆರಂಭಿಸಿದ್ದರು. ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಬೃಹತ್ ಪ್ರಮಾಣದ ಕಟ್ಟಡಗಳು, ಮಾಲ್‌ಗಳು ತಲೆ ಎತ್ತಿದವು. ಇವುಗಳಲ್ಲಿ ಹೊಟೇಲ್, ಲಾಡ್ಜ್ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳು ಆರಂಭಗೊAಡಿದ್ದವು. ಇದೀಗ ಬಹುತೇಕ ಹೊಟೇಲ್ ಹಾಗೂ ಲಾಡ್ಜ್ಗಳು ವ್ಯಾಪಾರವಿಲ್ಲದೆ ಮುಚ್ಚಿವೆ. ಮಾಲೀಕರಿಗೆ ಮಾಸಿಕ ಬಾಡಿಗೆ ನೀಡಲು ಸಾಧ್ಯವಾಗದೆ ಮುಂಗಡ ನೀಡಿದ ಹಣದಲ್ಲಿಯೇ ತಮ್ಮ ಬಾಡಿಗೆ ಹಣವನ್ನು ಭರ್ತಿ ಮಾಡಿ ವ್ಯಾಪಾರವನ್ನೇ ನಿಲ್ಲಿಸಿ ತೆರಳಿದ್ದಾರೆ. ಅಂಗಡಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಯುವತಿಯರಿಗೆ ಉದ್ಯೋಗವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಬಹುತೇಕ ಕುಟುಂಬಗಳು ತಮ್ಮ ಮಕ್ಕಳ ಮಾಸಿಕ ವೇತನವನ್ನು ನಂಬಿಕೊAಡು ಜೀವನ ಸಾಗಿಸುತ್ತಿದ್ದು, ಇದೀಗ ವ್ಯಾಪಾರೋದ್ಯಮ ಕುಸಿತ ಕಂಡಿರುವುದರಿAದ ಬಹುತೇಕ ಅಂಗಡಿಗಳಲ್ಲಿ ವರ್ತಕರ ಮಕ್ಕಳು, ಪತ್ನಿಯರು ತಾವೇ ಕೆಲಸದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಕಟ್ಟಡದ ಮಾಲೀಕರು ಕೂಡ ಬ್ಯಾಂಕಿನಲ್ಲಿ ಕೋಟ್ಯಾಂತರ ಸಾಲ ಮಾಡಿ ಮಾಸಿಕ ಕಂತನ್ನು ಕಟ್ಟಲಾರದ ಪರಿಸ್ಥಿತಿಗೆ ತಲುಪಿದ್ದಾರೆ. ಅಲ್ಲದೆ ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸಿ ಇವುಗಳನ್ನು ನಡೆಸಲು ಯಾರು ಕೂಡ ಮುಂದೆ ಬರುತ್ತಿಲ್ಲ. ದ.ಕೊಡಗಿನ ಕೇಂದ್ರ ಬಿಂದುವಾಗಿದ್ದ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಅನೇಕ ಕಟ್ಟಡಗಳು ಬಾಡಿಗೆಗೆ ಖಾಲಿ ಇವೆಯಾದರೂ ಯಾರೂ ಕೂಡ ಬಂಡವಾಳ ಹೂಡಲು ಮನಸ್ಸು ಮಾಡುತ್ತಿಲ್ಲ. ದೊಡ್ಡ ವ್ಯಾಪಾರಸ್ಥರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಅತೀ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಕೂಡ ದಿನವಿಡಿ ಕೆಲಸ ನಿರ್ವಹಿಸಿದರೂ ಸಂಜೆಯ ವೇಳೆಗೆ ಆ ದಿನದ ಕೂಲಿ ಕೂಡ ಲಭಿಸುತ್ತಿಲ್ಲ. ವಾರದ ೭ ದಿನಗಳು ಕೂಡ ಉತ್ತಮ ರೀತಿಯಲ್ಲಿ ವ್ಯಾಪಾರ ನಡೆಯುತ್ತಿದ್ದವು. ಆದರೆ ಇದೀಗ ವಾರದ ಸೋಮವಾರ ಮಾತ್ರ ಒಂದು ದಿನದ ವ್ಯಾಪಾರ ಜೋರಾಗಿ ನಡೆಯುತ್ತದೆ. ಇದನ್ನು ಹೊರತು ಪಡಿಸಿದರೆ ವಾರದ ಆರು ದಿನಗಳು ಕೂಡ ವ್ಯಾಪಾರ ಕುಸಿತ ಕಂಡಿದೆ.

ಮೌನವಹಿಸಿದ ಪಂಚಾಯಿತಿ

ಲಾಕ್‌ಡೌನ್ ಸಂದರ್ಭ ತಾತ್ಕಾಲಿಕವಾಗಿ ಜನರು ಹೆಚ್ಚಾಗಿ ಸೇರದಂತೆ ತಡೆಗಟ್ಟಲು ಪೊಲೀಸರು ಕ್ರಮ ಕೈಗೊಂಡಿದ್ದರು. ಆ ಸಂದರ್ಭ ಬೈಪಾಸ್ ಹಾಗೂ ಇತರೆಡೆ ತಾತ್ಕಾಲಿಕ ತರಕಾರಿ ಅಂಗಡಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವರು ಅಂಗಡಿ ತೆರೆದಿದ್ದರು. ಇದೀಗ ಲಾಕ್‌ಡೌನ್ ಮುಗಿದು ಹಲವು ದಿನಗಳು ಕಳೆದರೂ ಜನ ಸಂಚಾರದ ರಸ್ತೆ ಬದಿಗಳಲ್ಲಿ, ಬಸ್ ನಿಲ್ದಾಣದ ಸುತ್ತಮುತ್ತಲು ಪ್ರದೇಶ, ಬೈಪಾಸ್ ರಸ್ತೆಯಲ್ಲಿ ನಾಯಿಕೊಡೆಗಳಂತೆ ತರಕಾರಿ ಅಂಗಡಿಗಳು ತಲೆ ಎತ್ತಿವೆ. ಸ್ವಚ್ಛವಿಲ್ಲದ ಪ್ರದೇಶದಲ್ಲಿ ಇಂತಹ ವ್ಯಾಪಾರಗಳು ಯಾರ ಭಯವು ಇಲ್ಲದೆ ನಡೆಯುತ್ತಿದೆ.

ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಮೌನ ವಹಿಸಿದೆ. ನಗರದ ಸಾರ್ವಜನಿಕ ಶೌಚಾಲಯದ ಮುಂದೆ ರಾಜಾರೋಷವಾಗಿ ತರಕಾರಿ ವ್ಯಾಪಾರ ನಡೆಯುತ್ತಿದ್ದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮ ವಹಿಸುತ್ತಿಲ್ಲ. ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಬೈಪಾಸ್ ರಸ್ತೆ ಕೆಸರಿನ ಜಾಗದಲ್ಲಿ ಪ್ಲಾಸಿಕ್ ಹೊದಿಕೆಗಳನ್ನು ಹಾಕಿಕೊಂಡು ತರಕಾರಿ ವ್ಯಾಪಾರ ನಡೆಯುತ್ತಿವೆ. ನಗರದ ತರಕಾರಿ ಮಾರ್ಕೆಟ್‌ನಲ್ಲಿ ವಿಶಾಲವಾದ ಖಾಲಿ ಜಾಗವಿದ್ದರೂ ಬಸ್ ನಿಲ್ದಾಣದ ಆಸುಪಾಸಿನಲ್ಲಿ ನೆಲದ ಮೇಲೆಯೇ ತರಕಾರಿ ವ್ಯಾಪಾರ ನಡೆಯುತ್ತಿವೆ. ಮಾರ್ಕೆಟ್‌ನಲ್ಲಿ ತರಕಾರಿ ವ್ಯಾಪಾರ ನಡೆಸುವವರು ಕೂಡ ರಸ್ತೆಯ ಬದಿಯಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಶುಚಿತ್ವವನ್ನೇ ಕಾಪಾಡದ ಇಂತಹ ವ್ಯಾಪಾರಿಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕರು ಓಡಾಡುವ ರಸ್ತೆಗಳನ್ನು ಬಹುತೇಕ ಆಕ್ರಮಿಸಿಕೊಂಡು ವ್ಯಾಪಾರ ನಡೆಯುತ್ತಿದೆ. ಇದರಿಂದಾಗಿ ಜನರ ಓಡಾಟಕ್ಕೆ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮಾರ್ಕೆಟ್‌ನಲ್ಲಿ ಖಾಲಿ ಜಾಗ.!

ಬಸ್ ನಿಲ್ದಾಣದ ಆಸುಪಾಸಿನಲ್ಲಿ ವ್ಯಾಪಾರವನ್ನು ನಿಷೇಧಗೊಳಿಸಿದ್ದರೂ ಇಲ್ಲಿಯೇ ವ್ಯಾಪಾರಗಳು ನಡೆಯುತ್ತಿವೆ. ಬಹುತೇಕ ಅಂಗಡಿಗಳು ತಮ್ಮ ಮಳಿಗೆಯನ್ನು ಮೀರಿ ಸಾರ್ವಜನಿಕರು ಓಡಾಡುವ ರಸ್ತೆಗೆ ಸಾಮಗ್ರಿಗಳನ್ನು ಜೋಡಿಸಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗಿದೆ. ಈ ಹಿಂದೆ ಪಂಚಾಯಿತಿ ಕಠಿಣ ಕ್ರಮ ಕೈಗೊಂಡು ಅಂಗಡಿ ಹೊರಭಾಗದಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಗೊಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಬಂದೊದಗಿದೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ತರಕಾರಿ ಅಂಗಡಿಗಳನ್ನು ಮಾರ್ಕೆಟ್ ಆವರಣದಲ್ಲಿರುವ ಖಾಲಿ ಜಾಗಕ್ಕೆ ಸ್ಥಳಾಂತರಗೊಳಿಸಿದಲ್ಲಿ ಶುಚಿತ್ವ ಕಾಪಾಡುವುದರೊಂದಿಗೆ ಒಂದೇ ಜಾಗದಲ್ಲಿ ವ್ಯಾಪಾರ ಮಾಡುವ ಅವಕಾಶವೂ ಲಭ್ಯವಾಗಲಿದೆ. ಮಾರ್ಕೆಟ್ ಆವರಣದಲ್ಲಿ ಖಾಲಿ ಜಾಗಗಳು ಹಾಗೆಯೇ ಉಳಿದಿರುವುದರಿಂದ ಕೆಲವು ವ್ಯಾಪಾರಿಗಳು ಇವುಗಳನ್ನು ತಾತ್ಕಾಲಿಕವಾಗಿ ಗೋದಾಮುಗಳಾಗಿ ಮಾಡಿಕೊಂಡಿದ್ದಾರೆ.